ಗುಡ್ ನ್ಯೂಸ್ ಮೈಸೂರು’ ಕಡಿಮೆ ಆಗ್ತಿದೆ ಪಾಸಿಟಿವ್ ಕೇಸ್’ ಹೆಚ್ಚಾಗ್ತಿದೆ ಡಿಸ್ಚಾರ್ಜ್ ಸಂಖ್ಯೆ!
1 min readಮೈಸೂರು: ಮೈಸೂರಿನಲ್ಲಿಂದು 1,854 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 98,747 ಕ್ಕೇರಿಕೆರಿದೆ.
ಇನ್ನು ಇಂದು ಒಂದೇ ದಿನ 2,667 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಸತತ 3ನೇ ದಿನವು ಕೂಡ ಕೊರೊನಾ ಪಾಸಿಟಿವ್ ಹೊಂದಿದವರಿಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮೈಸೂರಿನಲ್ಲಿ ಇದುವರೆಗೂ 81,819 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 15,601ಕ್ಕೆ ಇಳಿಕೆಯಾಗಿದೆ.
ಇಂದು 13 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು, ಮೈಸೂರಿನಲ್ಲಿ ಇದುವರೆಗೆ 1,327 ಕೊರೊನಾ ಸೋಂಕಿತರು ಸಾವಿಗೀಡಾಗಿದ್ದಾರೆ.