ಮೈಸೂರಿಗೆ ಬಂತು 20 ಮೆಟ್ರಿಕ್ ಟನ್ ಆಕ್ಸಿಜನ್!
1 min readಮೈಸೂರು: ಸುಪ್ರೀಂಕೋರ್ಟ್ ಆದೇಶದನ್ವಯ ಮೈಸೂರಿಗೆ 20KL ಆಮ್ಲಜನಕ ಪೂರೈಕೆಯಾಗಿದೆ. ಟ್ಯಾಂಕರ್ ಮೂಲಕ ಆಮ್ಲಜನಕ ಮೈಸೂರಿನ ಕಡಕೊಳ ಕೈಗಾರಿಕಾ ಪ್ರದೇಶ ತಲುಪಿದೆ.
ಇಲ್ಲಿ ಆಮ್ಲಜನಕ ಶೇಖರಿಸಲು ಘಟಕ ಸೌಲಭ್ಯ ಇಲ್ಲದಿರುವ ಕಾರಣ ಕೇಂದ್ರ ಸರ್ಕಾರದಿಂದ ಬಂದ 20 ಮೆಟ್ರಿಕ್ ಟನ್ ಸಾಮರ್ಥ್ಯದ ಆಮ್ಲಜನಕದ ಒಂದು ಕಂಟೇನರ್‌ನ ಜಿಲ್ಲಾಧಿಕಾರಿಗಳು ವಿಶೇಷ ಅಧಿಕಾರ ಬಳಸಿ ತ್ರಿನೇತ್ರ ಗ್ಯಾಸಸ್‌ನ್ನ ಜಿಲ್ಲಾಢಳಿತ ತನ್ನ ಸುಪರ್ದಿಗೆ ಪಡೆದಿದೆ.
ಈಗಾಗಲೇ ಬಂದ ಟ್ಯಾಂಕರ್‌ನ್ನ ಮತ್ತೇ ಕಳುಹಿಸಬೇಕಿದ್ದ ಕಾರಣ ಕೆಐಎಡಿಬಿ ಕಡಕೊಳದ ಕೈಗಾರಿಕಾ ಪ್ರದೇಶದಲ್ಲಿ ಆಮ್ಲಜನಕ ಶೇಖರಣೆ ಮಾಡಲು ಘಟಕ ಇದ್ದರು ಸಹ ತ್ರಿನೇತ್ರ ಗ್ಯಾಸ್‌ಸ ಅವರು ಅದನ್ನ ಕಾರ್ಯ ನಿರ್ವಹಿಸದ ಕಾರಣ ಜಿಲ್ಲಾಧಿಕಾರಿಗಳು ತಮ್ಮ ವಿಶೇಷ ಅಧಿಕಾರ ಬಳಸಿ ಆ ಘಟಕದಲ್ಲಿ 20KL ಆಮ್ಲಜನಕವನ್ನ ಶೇಖರಿಸಲು ಸೂಚಿಸಿದ್ದಾರೆ. ಅಲ್ಲದೆ ಮುಂದಿನ ಆದೇಶದವರೆಗು ಸಹ ಆ ಘಟಕವನ್ನು ಜಿಲ್ಲಾಢಳಿತ ತಮ್ಮ ಸುಪರ್ದಿಗೆ ತೆಗೆದುಕೊಂಡಿದೆ. ಅಲ್ಲದೆ ಇದ್ದನ್ನ ಕೈಗಾರಿಕಾ ಅಧಿಕಾರಿಗಳು, ಪೊಲೀಸ್ ಇಲಾಖೆ ಸೇರಿ ಎಲ್ಲರಿಗು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.