ನಾಳೆಯಿಂದ ಲಾಕ್‌ಡೌನ್‌: ಸಾರ್ವಜನಿಕರಿಗೆ ಕೆಲವು ಸೂಚನೆ ನೀಡಿದ ಮೈಸೂರು ನಗರ ಪೊಲೀಸ್ ಆಯಕ್ತರು

1 min read

ಮೈಸೂರು: ದಿನೇ ದಿನೇ ಹೆಚ್ಚಾಗುತ್ತಿರುವ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಸರ್ಕಾರದಿಂದ ಕಠಿಣ ನಿಯಮ ತಂದಿದ್ದು ನಾಳೆಯಿಂದ ಜಾರಿಯಾಗಲಿದೆ. ಮೈಸೂರಿನಲ್ಲೂ ಕಟ್ಟು‌ನಿಟ್ಟಿನ ನಿಯಮ ಜಾರಿಗೆ ಪೊಲಿಸರು ಸಿದ್ದರಾಗಿದ್ದಾರೆ.

ಮೈಸೂರು ನಗರ ಪೊಲೀಸ್ ಆಯಕ್ತ ಡಾ ಚಂದ್ರಗುಪ್ತ ಅವರು ಸಾರ್ವಜನಿಕರಿಗೆ ಕೆಲವು ಸೂಚನೆ ನೀಡಿದ್ದಾರೆ.

  • ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅವಶ್ಯಕ ವಸ್ತುಗಳ (ದಿನಸಿ, ಹಣ್ಣು, ತರಕಾರಿಗಳು) ಖರೀದಿಗೆ ಅವಕಾಶವಿದ್ದು ನಿಗದಿಪಡಿಸಿದ ಸಮಯದಲ್ಲಿ ಖರೀದಿಗೆ ಕೆಲವು ಸೂಚನೆ
  • ಖರೀದಿಸಲು ತಮ್ಮ ಮನೆಯ ಸಮೀಪದ ಅಂಗಡಿಗಳಗೇ ಹೋಗಬೇಕು
  • ಈ ವೇಳೆ ಯಾವುದೇ ಸ್ವಂತ ವಾಹನ ಬಳಸುವಂತಿಲ್ಲ
  • ಕಾಲ್ನಡಿಗೆಯಲ್ಲಿಯೇ ಹೋಗಿ ಖರೀದಿಸಬೇಕು
  • ಒಂದು ವೇಳೆ ಸ್ವಂತ ವಾಹನಗಳನ್ನು (ದ್ವಿ ಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು) ಉಪಯೋಗಿಸಿದರೆ ಕಾನೂನು ಕ್ರಮ
  • ಬಳಸಿದ ವಾಹನಗಳನ್ನು ಜಪ್ತಿ ಮಾಡಲಾಗುವುದು
  • ಜಪ್ತಿ ಮಾಡಿದ ವಾಹನಗಳನ್ನು 15 ದಿನಗಳವರೆಗೆ ಅಥವಾ ಸರ್ಕಾರದ ಉಲ್ಲೇಖದ ಆದೇಶ ಚಾಲ್ತಿಯಲ್ಲಿರುವವರೆಗೆ ವಾಪಸ್ಸು ನೀಡುವುದಿಲ್ಲ
  • ಗೂಡ್ಸ್ ವಾಹನ ಹೊರತುಪಡಿಸಿ ಯಾವುದೇ ಸ್ವಂತ ವಾಹನಗಳನ್ನು ಬಳಸುವಂತಿಲ್ಲ .
  • ಪ್ರತಿ ಮನೆಯ ಅಥವಾ ಕುಟುಂಬದ ಒಬ್ಬ ಸದಸ್ಯರು ಮಾತ್ರ ಅವಶ್ಯವಿರುವ ವಸ್ತುಗಳನ್ನು ಖರೀದಿಸಲು ಬರಬೇಕು
  • ಖರೀದಿಗೆ ನಗರದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗುವುದನ್ನು ನಿರ್ಭಂಧಿಸಲಾಗಿದೆ
  • ಖರೀದಿಗೆ ಬರುವವರು ಸೂಕ್ತ ಕಾರಣ ವಿಳಾಸ ಧೃಡಿಕರಣದ ದಾಖಲಾತಿ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು
  • ಪೊಲೀಸ್ ಅಧಿಕಾರಿ ಸಿಬ್ಬಂದಿ ಕೇಳಿದಾಗ ತೋರಿಸಬೇಕು
  • ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಜೊತೆ ವಾದ ಮಾಡುವವರ ವಿರುದ್ದ ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ದ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು
  • ನಿಯಮಗಳನ್ನು ಪಾಲಿಸಿ ಪೊಲೀಸರ ಜೊತೆ ಸಹಕರಿಸಿ ಅಂತ ಮೈಸೂರು ನಗರ ಪೊಲೀಸ್ ಆಯುಕ್ತರಾದ ಡಾ ಚಂದ್ರಗುಪ್ತ ಮನವಿ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *