ನಾಳೆಯಿಂದ ಲಾಕ್ಡೌನ್: ಸಾರ್ವಜನಿಕರಿಗೆ ಕೆಲವು ಸೂಚನೆ ನೀಡಿದ ಮೈಸೂರು ನಗರ ಪೊಲೀಸ್ ಆಯಕ್ತರು
1 min readಮೈಸೂರು: ದಿನೇ ದಿನೇ ಹೆಚ್ಚಾಗುತ್ತಿರುವ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಸರ್ಕಾರದಿಂದ ಕಠಿಣ ನಿಯಮ ತಂದಿದ್ದು ನಾಳೆಯಿಂದ ಜಾರಿಯಾಗಲಿದೆ. ಮೈಸೂರಿನಲ್ಲೂ ಕಟ್ಟುನಿಟ್ಟಿನ ನಿಯಮ ಜಾರಿಗೆ ಪೊಲಿಸರು ಸಿದ್ದರಾಗಿದ್ದಾರೆ.
ಮೈಸೂರು ನಗರ ಪೊಲೀಸ್ ಆಯಕ್ತ ಡಾ ಚಂದ್ರಗುಪ್ತ ಅವರು ಸಾರ್ವಜನಿಕರಿಗೆ ಕೆಲವು ಸೂಚನೆ ನೀಡಿದ್ದಾರೆ.
- ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅವಶ್ಯಕ ವಸ್ತುಗಳ (ದಿನಸಿ, ಹಣ್ಣು, ತರಕಾರಿಗಳು) ಖರೀದಿಗೆ ಅವಕಾಶವಿದ್ದು ನಿಗದಿಪಡಿಸಿದ ಸಮಯದಲ್ಲಿ ಖರೀದಿಗೆ ಕೆಲವು ಸೂಚನೆ
- ಖರೀದಿಸಲು ತಮ್ಮ ಮನೆಯ ಸಮೀಪದ ಅಂಗಡಿಗಳಗೇ ಹೋಗಬೇಕು
- ಈ ವೇಳೆ ಯಾವುದೇ ಸ್ವಂತ ವಾಹನ ಬಳಸುವಂತಿಲ್ಲ
- ಕಾಲ್ನಡಿಗೆಯಲ್ಲಿಯೇ ಹೋಗಿ ಖರೀದಿಸಬೇಕು
- ಒಂದು ವೇಳೆ ಸ್ವಂತ ವಾಹನಗಳನ್ನು (ದ್ವಿ ಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು) ಉಪಯೋಗಿಸಿದರೆ ಕಾನೂನು ಕ್ರಮ
- ಬಳಸಿದ ವಾಹನಗಳನ್ನು ಜಪ್ತಿ ಮಾಡಲಾಗುವುದು
- ಜಪ್ತಿ ಮಾಡಿದ ವಾಹನಗಳನ್ನು 15 ದಿನಗಳವರೆಗೆ ಅಥವಾ ಸರ್ಕಾರದ ಉಲ್ಲೇಖದ ಆದೇಶ ಚಾಲ್ತಿಯಲ್ಲಿರುವವರೆಗೆ ವಾಪಸ್ಸು ನೀಡುವುದಿಲ್ಲ
- ಗೂಡ್ಸ್ ವಾಹನ ಹೊರತುಪಡಿಸಿ ಯಾವುದೇ ಸ್ವಂತ ವಾಹನಗಳನ್ನು ಬಳಸುವಂತಿಲ್ಲ .
- ಪ್ರತಿ ಮನೆಯ ಅಥವಾ ಕುಟುಂಬದ ಒಬ್ಬ ಸದಸ್ಯರು ಮಾತ್ರ ಅವಶ್ಯವಿರುವ ವಸ್ತುಗಳನ್ನು ಖರೀದಿಸಲು ಬರಬೇಕು
- ಖರೀದಿಗೆ ನಗರದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗುವುದನ್ನು ನಿರ್ಭಂಧಿಸಲಾಗಿದೆ
- ಖರೀದಿಗೆ ಬರುವವರು ಸೂಕ್ತ ಕಾರಣ ವಿಳಾಸ ಧೃಡಿಕರಣದ ದಾಖಲಾತಿ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು
- ಪೊಲೀಸ್ ಅಧಿಕಾರಿ ಸಿಬ್ಬಂದಿ ಕೇಳಿದಾಗ ತೋರಿಸಬೇಕು
- ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಜೊತೆ ವಾದ ಮಾಡುವವರ ವಿರುದ್ದ ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು
- ನಿಯಮಗಳನ್ನು ಪಾಲಿಸಿ ಪೊಲೀಸರ ಜೊತೆ ಸಹಕರಿಸಿ ಅಂತ ಮೈಸೂರು ನಗರ ಪೊಲೀಸ್ ಆಯುಕ್ತರಾದ ಡಾ ಚಂದ್ರಗುಪ್ತ ಮನವಿ ಮಾಡಿದ್ದಾರೆ.