ಮೈಸೂರು ಪ್ರಭಾರ ಮೇಯರ್ ಆಗಿರುವ ಅನ್ವರ್’ಗೆ ಅದೃಷ್ಟವೋ ಅದೃಷ್ಟ!
1 min readಮೈಸೂರು: ಮೈಸೂರು ಪ್ರಭಾರ ಮೇಯರ್ ಆಗಿರುವ ಅನ್ವರ್ ಗೆ ಅದೃಷ್ಟವೋ ಅದೃಷ್ಟ. ಮುಂದಿನ ಆರು ತಿಂಗಳವರೆಗೂ ಪ್ರಭಾರ ಮೇಯರ್ ಆಗಿ ಇರಲಿದ್ದಾರೆ ಅನ್ವರ್. ಶಾಂತಕುಮಾರಿ, ಸುನಂದಪಾಲನೇತ್ರಾ ಸೇರಿದಂತೆ ಮೇಯರ್ ಆಕಾಂಕ್ಷಿಗಳಿಗೆ ಬ್ಯಾಡ್ ನ್ಯೂಸ್.
ಕೋವಿಡ್19 ಹಿನ್ನೆಲೆಯಲ್ಲಿ ಆರು ತಿಂಗಳುಗಳ ಕಾಲ ಚುನಾವಣೆ ಸರ್ಕಾರ ಮುಂದೂಡಿದೆ. ಸ್ಥಳೀಯ ಸಂಘ, ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಮೇಯರ್ ಚುನಾವಣೆ . ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗಳನ್ನು ಮುಂದೂಡಿದೆ ಸರ್ಕಾರ.
ಮುಂದಿನ ಆರು ತಿಂಗಳವರೆಗೆ ಚುನಾವಣೆಗಳನ್ನ ನಡೆಸಬಾರದೆಂದು ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಮಹತ್ವದ ಆದೇಶ ಹೊರಡಿಸಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಸರಕಾರದ ಮಹತ್ವದ ಆದೇಶ ಪ್ರಕಟಗೊಂಡಿದೆ.