ಮೈಸೂರಿನಲ್ಲಿ ಮತ್ತೆ ಅಧಿಕಾರಿ ಎತ್ತಂಗಡಿ

1 min read

ಬೆಂಗಳೂರು: ಮೈಸೂರಿನಲ್ಲಿ ಪರಸ್ಪರ ಬೀದಿ ಜಗಳಕ್ಕೆ ಇಳಿದಿದ್ದ ಐಎಎಸ್ ಅಧಿಕಾರಿಗಳ ಎತ್ತಂಗಡಿ ನಂತರ ಈಗ ಮತ್ತೊಬ್ಬ ಹಿರಿಯ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ವಿಧಿಸಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್ ವಿಕೋಪ ಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ ಎನ್ನುವ ಕಾರಣಕ್ಕೆ ಈತನಕ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ಆರೋಗ್ಯ ಅಧಿಕಾರಿ ಅಮರನಾಥ್ ಅವರನ್ನು ಸರಕಾರ ವರ್ಗಾವಣೆ ಮಾಡಿದೆ. ಇವರ ಜಾಗಕ್ಕೆ ಆರೋಗ್ಯ ಇಲಾಖೆ ವಿಭಾಗಿಯ ಉಪನಿರ್ದೇಶಕ ಡಾ. ಕೆ.ಎಚ್. ಪ್ರಸಾದ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಡಾ. ಕೆ.ಎಚ್. ಪ್ರಸಾದ್

ಮೈಸೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ, ಸಾವು ಅಧಿಕ ಗೊಳ್ಳಲು ಸೂಕ್ತ ನಿರ್ವಹಣೆ ಕೊರತೆಯೆರ ಕಾರಣ ಎನ್ನಲಾಗಿತ್ತು. ಅಲ್ಲದೆ ಪರಿಸ್ಥಿತಿ ನಿರ್ವಹಣೆ ವಿಚಾರವಾಗಿ ಆರೋಗ್ಯಾಧಿಕಾರಿ ಅಮರನಾಥ್ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಅವರಿಗೆ ಕಾಲಕಾಲಕ್ಕೆ ಮಾಹಿತಿ ಕೊಟ್ಟು ಸಮನ್ವಯ ಮಾಡುವುದರಲ್ಲೂ ಅಮರನಾಥ್ ವಿಫಲರಾಗಿದ್ದರು ಎನ್ನುವ ಮಾಹಿತಿ ಸರಕಾರಕ್ಕೆ ಹೋಗಿತ್ತು.

ಸದ್ಯ ನೇಮಕಗೊಂಡಿರುವ ಡಾ. ಪ್ರಸಾದ್ ಅವರು ಈ ಹಿಂದೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದ್ದ ಸುಳ್ವಾಡಿ ಪ್ರಸಾದ ತಿಂದು ಬಲಿಯಾದ ದುರಂತದಲ್ಲಿ ಸಕಾಲಿಕವಾಗಿ ಕಾರ್ಯನಿರ್ವಹಿಸಿದ್ದರು ಆಮೂಲಕ ನೂರಾರು ಜನರನ್ನು ಬದುಕುಳಿಯುವಂತೆ ಮಾಡಿದ್ದರು ಎಂದು ಮಾಹಿತಿವ ಪಡೆದಿತ್ತು.

ಹೀಗಾಗಿ ಕೋವಿಡ್ ನಂತ ವಿಕೋಪ ಸ್ಥಿತಿ ನಿರ್ವಹಣೆಗಾಗಿ ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ.

About Author

Leave a Reply

Your email address will not be published. Required fields are marked *