ಮೈಸೂರು ಮೇಯರ್ ಸದಸ್ಯತ್ವ ರದ್ದು ಹಿನ್ನೆಲೆ: ಮೇಯರ್ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿ
1 min readಮೈಸೂರು: ಮೈಸೂರು ಪಾಲಿಕೆ ಮೇಯರ್ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದು ಹಿನ್ನೆಲೆ ತೆರವಾಗಿದ್ದ ಮೇಯರ್ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗಧಿಪಡಿಸಲಾಗಿದೆ.
ಮೇಯರ್ ಸ್ಥಾನಕ್ಕೆ ಜೂನ್ 11ರಂದು ಚುನಾವಣೆ ನಡೆಯಲಿದೆ ಅಂತ ಪ್ರಾದೇಶಿಕ ಆಯುಕ್ತ ಜಿ.ಸಿ ಪ್ರಕಾಶ್ ಜೊತೆ ಚರ್ಚೆ ಬಳಿಕ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಮಾಹಿತಿ ನೀಡಿದ್ದಾರೆ.
ಚುನಾವಣೆ ನಡೆಯುವರೆಗೂ ಉಪಮೇಯರ್ಗೆ ಅಧಿಕಾರವಿರಲಿದೆ. ನಿನ್ನೆ ರಾತ್ರಿ ನಮಗೆ ರುಕ್ಮಿಣಿ ಮಾದೇಗೌಡರ ಸದಸ್ಯ ರದ್ದು ಆದೇಶ ಬಂದಿದೆ. ತಕ್ಷಣ ನಾವೂ ಪ್ರದೇಶ ಆಯಕ್ತರಿಗೆ ಪತ್ರ ಬರೆದಿದ್ದೆವು. ಇಂದು ಚರ್ಚೆಗೆ ಪ್ರಾದೇಶಿಕ ಆಯುಕ್ತರು ಕರೆದಿದ್ರು. ಜೂನ್ 11 ರಂದು ಚುನಾವಣೆಗೆ ದಿನಾಂಕ ನಿಗದಿ ಮಾಡಿದ್ದೇವೆ. ಕಾಯ್ದೆಯಲ್ಲಿ ಮತ್ತೆ ಚುನಾವಣೆಗೆ ಅವಕಾಶ ಇದೆ ಎಂಬುದನ್ನ ಪರಿಶೀಲಿಸಿ ತೀರ್ಮಾನ ಮಾಡಲಾಗಿದೆ.
ಕೊರೋನಾ ನಿಯಮಗಳನ್ನ ಪಾಲಿಸಿ ಎಲರಿಗೂ ಆರ್ ಟಿ ಪಿಸಿ ಆರ್ ಟೆಸ್ಟ್ ಮಾಡಿಸಿ ಚುನಾವಣೆ ನಡೆಸುತ್ತೇವೆ. ಚುನಾವಣೆ ಆಗುವವರೆಗೂ ಉಪಮೇಯರ ಅವರೇ ಮೇಯರ್ ಅಧಿಕಾರ ಚಲಾಯಿಸುತ್ತಾರೆ ಅಂತ ಮೈಸೂರು ಪಾಲಿಕೆ ಅಯುಕ್ತೆ ಶಿಲ್ಪಾನಾಗ್ ಮಾಹಿತಿ ನೀಡಿದ್ದಾರೆ.