ಇಂದಿನಿಂದ ರಂಗೇರಲಿರುವ ಮೇಯರ್ ಚುನಾವಣೆ ಕಣ
1 min readಮೈಸೂರು: ಇಂದಿನಿಂದ ಮೈಸೂರಿನಲ್ಲಿ ಮೇಯರ್ ಚುನಾವಣೆ ಕಣ ರಂಗೇರಲಿದೆ. ಪಾಲಿಕೆಯಲ್ಲಿ ಮುಂದುವರಿಯಲಿದ್ಯಾ ದೋಸ್ತಿ ದರ್ಬಾರ್ ಎಂಬ ಪ್ರಶ್ನೆ ಮೂಡಿದೆ.
ಇನ್ನು ಮೇಯರ್ ಹುದ್ದೆಯ ಕನಸು ನನಸು ಮಾಡಲು ಬಿಜೆಪಿಗೆ ಮತ್ತೊಂದು ಅವಕಾಶ ಇದ್ದು ಕಾದು ನೋಡುವ ತಂತ್ರದಲ್ಲಿದೆ. ಕಾಂಗ್ರೆಸ್ ಜೆಡಿಎಸ್ ನಲ್ಲಿ ಭುಗಿಲೇಳುವ ಸಾಧ್ಯತೆ..? ಇಂದು ಜೆಡಿಎಸ್ ನಾಯಕರ, ಸದಸ್ಯರ ಸಭೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಮೇಯರ್ ಹುದ್ದೆಯ ಅಭ್ಯರ್ಥಿ ಆಯ್ಕೆಯ ಬಗ್ಗೆ ಚರ್ಚೆ ನಡೆಯಲಿದ್ದು, ಅಭಿಪ್ರಾಯ ಸಂಗ್ರಹಿಸಿ ವರಿಷ್ಠರ ಗಮನಕ್ಕೆ ಜಿಲ್ಲಾ ನಾಯಕರು ಕೊಂಡೊಯ್ಯಲಿದ್ದಾರೆ.
ಮೇಯರ್ ಚುನಾವಣೆಯ ಆಯ್ಕೆಯ ಬಗ್ಗೆ ಕೈ ಪಾಳಯ ಸೈಲೆಂಟ್ ಆಗಿದೆ. ಚುನಾವಣೆ ಹತ್ತಿರದಲ್ಲಿದ್ದರು ತಲೆ ಕೆಡಿಸಿಕೊಳ್ಳದ ಕೈ ನಾಯಕರು. ಮೇಯರ್ ಹುದ್ದೆಯನ್ನ ಜೆಡಿಎಸ್ ಗೆ ಮುಂದುವರಿಸುವ ಸಾಧ್ಯತೆ ಇದೆ. ಇಂದು ಸಂಜೆಯೊಳಗೆ ಮೇಯರ್ ಚುನಾವಣೆಯ ಬೆಳವಣಿಗೆಗಳು ಪ್ರಾರಂಭವಾಗುವ ನಿರೀಕ್ಷೆ ಇದೆ. ಜೂ.11ಕ್ಕೆ ಮೇಯರ್ ಚುನಾವಣೆ ಹಿನ್ನಲೆ ತಯಾರಿ ನಡೆಯುತ್ತಿದೆ.