ಮೈಸೂರು-ಮಂಡ್ಯದ ಜಿಲ್ಲಾಧಿಕಾರಿಗಳ ವಿಶೇಷತೆ ಏನ್ ಗೊತ್ತಾ..?
1 min readಮೈಸೂರು: ಮೈಸೂರು ನೂತನ ಜಿಲ್ಲಾಧಿಕಾರಿಯಾಗಿ ಡಾ ಬಗಾದಿ ಗೌತಮ್ ನಿಯೋಜನೆಗೊಂಡಿದ್ದಾರೆ. ಇದು ಒಂದು ರೀತಿ ವಿಶೇಷವಾದ ಸಂದರ್ಭ. ಡಾ ಬಗಾದಿ ಗೌತಮ್ ಅವರ ಪತ್ನಿ ಎಸ್ ಅಶ್ವಥಿ ಪಕ್ಕದ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಹಿಂದೆ ಸಹಾ ಮೈಸೂರು ಮಂಡ್ಯ ಜಿಲ್ಲೆ ಇಂತಹದ್ದೇ ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು. ಆಗ ಮೈಸೂರಿನಲ್ಲಿ ಜಿಲ್ಲಾಧಿಕಾರಿ ಸಿ ಶಿಖಾ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಪತಿ ಡಾ ಎಂ ಎನ್ ಅಜಯ್ ನಾಗಭೂಷಣ್ ಮಂಡ್ಯ ಜಿಲ್ಲಾಧಿಕಾರಿಯಾಗಿದ್ದರು. ಮತ್ತೊಂದು ವಿಶೇಷ ಅಂದರೆ ಡಾ ಎಂ ಎನ್ ಅಜಯ ನಾಗಭೂಷಣ್ ಹಾಗೂ ಡಾ ಬಗಾದಿ ಗೌತಮ್ ಇಬ್ಬರು ವೈದ್ಯಕೀಯ ಶಿಕ್ಷಣ ಪಡೆದವರಾಗಿದ್ದಾರೆ.