ಮೈಸೂರು ಪೊಲೀಸ್ ಆಯುಕ್ತರಿಂದ ಲಾಕ್‌ಡೌನ್ ಮಾರ್ಗಸೂಚಿ ರಿಲೀಸ್!
1 min readರಾಜ್ಯದಲ್ಲಿ ಎಲ್ಲ ಜಿಲ್ಲೆಗಳಿಗೆ ಲಾಕ್‌ಡೌನ್ ಸಡಿಲಿಕೆ ಮಾಡಿದ್ರು ಸಹ ಮೈಸೂರಲ್ಲಿ ಮಾತ್ರ ಈ ಲಾಕ್‌ಡೌನ್ ಮುಂದುವರೆಯುತ್ತಿದ್ದು ಪೊಲೀಸ್ ಇಲಾಖೆಯಿಂದ ಮುಂದಿನ ದಿನಾಂಕದ ವರೆಗು ಮಾರ್ಗಸೂಚಿ ಬಿಡುಗಡೆಯಾಗಿದೆ. ಮೈಸೂರು ಜಿಲ್ಲೆಯಾದ್ಯಂತ ಕರೋನಾ ಕಡಿಮೆಯಾಗದ ಕಾರಣ ಲಾಕ್‌ಡೌನ್ ಮುಂದುವರೆದಿದೆ. ಮೈಸೂರಿನಲ್ಲಿ ಜೂನ್ 21 ರಿಂದ ಜು.5ರ ವರೆಗು 144 ಸೆಕ್ಷನ್ ಜಾರಿ ಮಾಡಿ ಮೈಸೂರು ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರು ಆದೇಶ ಹೊರಡಿಸಿದ್ದಾರೆ.
- ಸಾರ್ವಜನಿಕರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಠಿಯಿಂದ ಕರೋನಾ ಹರಡುವುದನ್ನು ತಡೆಗಟ್ಟಲು ಸರ್ಕಾರದ ಆದೇಶದ ಅನುಸಾರ ಮೈಸೂರಿಗೆ ಯಾವುದೇ ವಿನಾಯಿತಿ ನೀಡದೆ ಸದ್ಯ ಈಗಿರುವ ನಿರ್ಬಂಧಗಳನ್ನು ಯಥಾಸ್ಥಿತಿ ಮುಂದುವರೆಸಲು ಆದೇಶಿಸಲಾಗಿದೆ. ಆದ ಕಾರಣ ಮತ್ತಷ್ಟು ಜಿಲ್ಲೆಯ ಟಫ್ ರೂಲ್ಸ್ ಜಾರಿಗೆ ಸಿದ್ದತೆ ನಡೆಯುತ್ತಿದೆ.
ಪೊಲೀಸ್ ಆಯುಕ್ತರು ತಮ್ಮ ವಿಶೇಷ ಅಧಿಕಾರ ಬಳಸಿ 21/6/2021ರ ಬೆಳಿಗ್ಗೆ 6.00 ರಿಂದ ಜುಲೈ 5ರ ಬೆಳಿಗ್ಗೆ 5ಗಂಟೆಯ ವರೆಗು ಮೈಸೂರು ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಇನ್ನು ಜನರು ಯಾವುದೇ ಕಾರಣಕ್ಕೂ 5 ಜನರಿಗಿಂತ ಹೆಚ್ಚಾಗಿ ಒಟ್ಟಿಗೆ ಸೇರುವಂತಿಲ್ಲ
ಸಾರ್ವಜನಿಕ ಕಡ್ಡಾಯವಾಗಿ ಮಾಸ್ಕ್ ಧರಿಸುವುದು
ಪ್ರದೇಶಗಳಲ್ಲಿ ಕನಿಷ್ಠ 6 ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಉಲ್ಲೇಖಿತ ಸರ್ಕಾರದ ಆದೇಶಗಳಲ್ಲಿ ಹೊರಡಿಸಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು
ಸಾರ್ವಜನಿಕರು ನಿಯಮಗಳನ್ನು ಉಲ್ಲಂಘಿಸಿ ಜನರನ್ನು ಒಟ್ಟುಗೂಡಿಸಿ ಯಾವುದೇ ರೀತಿಯ ಧರಣಿ, ಪ್ರತಿಭಟನೆ ಹಾಗೂ ಕಾರ್ಯಕ್ರಮಗಳನ್ನು ಮಾಡಲು ಅವಕಾಶವಿರುವುದಿಲ್ಲ
ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅಂಥವರ ವಿರುದ್ಧ ಸಂಬಂಧಪಟ್ಟ ಠಾಣಾಧಿಕಾರಿಗಳು ತಪ್ಪದೇ ಕ್ರಮತೆಗೆದುಕೊಳ್ಳಲು ಆದೇಶಿಸಲಾಗಿದೆ
-ಈ ಆದೇಶವು ಕರೋನಾ ತಡೆಗಟ್ಟುವ ಕರ್ತವ್ಯ ಕಾರ್ಯಗಳಲ್ಲಿ ಭಾಗಿಯಾಗಿರುವವರಿಗೆ ಮತ್ತು ಕೋವಿಡ್ ಲಸಿಕೆ ಸಂಬಂಧ ಸೇರುವ ಜನರಿಗೆ ಅನ್ವಯಿಸುವುದಿಲ್ಲ ಎಂದು ಆದೇಶಿಸಲಾಗಿದೆ.