ಮೈಸೂರಿಗೆ ಮತ್ತಷ್ಟು ಆಕ್ಸಿಜನ್ ಬಲ: ಕೆಎಸ್ ಆರ್ಟಿಸಿ ಬಸ್ ಗಳಲ್ಲಿ ಆಕ್ಸಿಜನ್ ಪೂರೈಕೆ!
1 min readಮೈಸೂರು: ಆಕ್ಸಿಜನ್ ಬೆಡ್ ಕೊರತೆ ನೀಗಿಸಲು “ಆಕ್ಸಿಜನ್ ಆನ್ ವೀಲ್” ಸಿದ್ದಗೊಂಡಿದ್ದು ಈ ಮೂಲಕ ಮೈಸೂರಿಗೆ ಮತ್ತಷ್ಟು ಆಕ್ಸಿಜನ್ ಬಲ ಒದಗಿದೆ.
ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಾಲ್ಕು ಆಕ್ಸಿಜನ್ ಬಸ್ ನಿರ್ಮಾಣ ಮಾಡಲಾಗಿದ್ದು ಕೆಎಸ್ ಆರ್ಟಿಸಿ ಬಸ್ ಗಳಲ್ಲಿ ಆಕ್ಸಿಜನ್ ಪೂರೈಕೆ ಮಾಡಲಾಗುತ್ತದೆ. ಒಂದು ಆಕ್ಸಿಜನ್ ಬೆಡ್, ನಾಲ್ಕು ಆಕ್ಸಿಜನ್ ಕಾಂನ್ಸನ್ಟ್ರೇಟರ್, ಹಾಗೂ ಎರಡು ಸಿಲಿಂಡರ್ ಗಳನ್ನು ಈ ಬಸ್ ಒಳಗೊಂಡಿದೆ.
ನಾಲ್ಕು ಬಸ್ ಗಳನ್ನು ಕೆ.ಎಸ್.ಆರ್.ಟಿ.ಸಿ. ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದೆ. ಬನ್ನಿಮಂಟಪದ ಬಸ್ ಡಿಪೋ ಬಳಿ ಆಕ್ಸಿಜನ್ ಬಸ್ ಅನ್ನು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗೆ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮತ್ತಿತರರು ಉಪಸ್ಥಿತಿ.
ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಈ ಆಕ್ಸಿಜನ್ ಬಸ್ಗಳು ಸಂಚರಿಸಲಿದೆ. ಅಗತ್ಯ ಬಿದ್ದರೆ ಆಸ್ಪತ್ರೆ ಮುಂಭಾಗವೂ ಕಾರ್ಯನಿರ್ವಹಿಸಲು ಸಜ್ಜಾಗಿ ನಿಂತಿದೆ.