ಇಂದಿನಿಂದ ಮೈಸೂರಿನಲ್ಲಿ ಕಠಿಣ ಲಾಕ್ಡೌನ್: ಸಂಪೂರ್ಣ ಸ್ಥಬ್ಥವಾದ ಮೈಸೂರು ನಗರ!

1 min read

ಮೈಸೂರು: ಇಂದಿನಿಂದ ಮೈಸೂರಿನಲ್ಲಿ ಕಠಿಣ ಲಾಕ್ ಡೌನ್ ನಿಯಮ ಜಾರಿಯಾಗಿದೆ. ಜಿಲ್ಲೆಯಾದ್ಯಂತ ಪೊಲೀಸರಿಂದ ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ. ಹಾಲು ಮೆಡಿಕಲ್ ಹಾಪ್‌ಕಾಮ್ಸ್ ಬಿಟ್ಟು ಎಲ್ಲಾ ವ್ಯಾಪಾರ ಬಂದ್ ಆಗಿದೆ.

ಜಿಲ್ಲೆಯಲ್ಲಿ ಕೊರೊನ ಸಂಖ್ಯೆ ಹೆಚ್ಚಳ ಹಿನ್ನೆಲೆ ಜಿಲ್ಲಾಡಳಿತದಿಂದ ಟಫ್ ರೂಲ್ಸ್‌ ಜಾರಿ ಆಗಿತ್ತು. ವಾರದಲ್ಲಿ ಸೋಮವಾರ ಮತ್ತು ಗುರುವಾರ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ. ಬೆಳಗ್ಗೆ 6ರಿಂದ 12 ಗಂಟೆಯೊಳಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಔಷಧಿ ಕೊಂಡುಕೊಳ್ಳಲು ಮಾತ್ರ ಅವಕಾಶ ನಿಡಲಾಗಿದೆ. ಒಂದು ವೇಳೆ ಅನಗತ್ಯವಾಗಿ ಜನರು ರೋಡಿಗಿಳಿದರೆ ಪೊಲೀಸರಿಂದ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇಂದಿನಿಂದ ಜೂನ್ 7ರ ವರಗೆ ಮುಂದುವರಿಯಲಿದೆ ನೂತನ ಕ್ರಮ.

ನಗರದ ಪ್ರಮುಖ ರಸ್ತೆಗಳು ಖಾಲಿ ಖಾಲಿ

ಕಠಿಣ ಲಾಕ್ಡೌನ್ ಹಿನ್ನಲೆ ಮೈಸೂರು ನಗರ ಸಂಪೂರ್ಣ ಸ್ಥಬ್ಥವಾಗಿದೆ. ನಗರದ ಪ್ರಮುಖ ರಸ್ತೆಗಳು ಖಾಲಿ ಖಾಲಿ ಆಗಿದೆ. ನಿಶಬ್ದವಾದ ದೇವರಾಜ ಮಾರುಕಟ್ಟೆ, ಸುತ್ತಲೂ ಬ್ಯಾರಿಕೇಡ್ ಅಳವಡಿಕೆ. ನಗರದ ಹೃದಯಭಾಗ ಕೆ.ಆರ್.ವೃತ್ತದಲ್ಲಿ ಸಂಚಾರ ವಿರಳ. ಗೂಡ್ಸ್ ವಾಹನ, ಹಾಲಿನ ವಾಹನ, ಆರೋಗ್ಯ ಸೇವೆ, ಮೆಡಿಕಲ್ ಎಮರ್ಜೆನ್ಸಿ ಹೊರತುಪಡಿಸಿ ಉಳಿದೆಲ್ಲವೂ ಬಂದ್..! ಟಫ್ ರೂಲ್ಸ್ ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ನೀಡಿದ್ದಾರೆ.

ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಪೊಲೀಸರು!

ಮೈಸೂರಿನಲ್ಲಿ ಸಂಪೂರ್ಣ ಲಾಕ್‌ಡೌನ್ ಹಿನ್ನಲೆ ಬೆಳ್ಳಂಬೆಳಗ್ಗೆ ಪೊಲೀಸರು ರಸ್ತೆಗಿಳಿದಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿದವರನ್ನು ಪೊಲೀಸರು ಮನೆಗೆ ಕಳುಹಿಸುತ್ತಿದ್ದಾರೆ. ಮೈಸೂರಿ‌ ನಂಜುಮಳಿಗೆ ಬಳಿ ಪೊಲೀಸರ ಕಾರ್ಯಾಚರಣೆ ನಡೆಯುತ್ತಿದ್ದು ಕುಂಟು ನೆಪ ಹೇಳಿಕೊಂಡು ಬರುತ್ತಿರುವ ಜನರಿಗೆ ವಾರ್ನಿಂಗ್ ನೀಡಿದ್ದಾರೆ.

About Author

Leave a Reply

Your email address will not be published. Required fields are marked *