ಲಾಕ್ಡೌನ್ ಎಫೆಕ್ಟ್: ಬೀದಿಬದಿಯ ಪ್ರಾಣಿಗಳಿಗೆ ಆಹಾರ ನೀಡುತ್ತಿರುವ ಮೈಸೂರಿನ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್
1 min readಮೈಸೂರು: ಕೊರೊನಾ ಸೊಂಕು ತಡೆಗಟ್ಟಲು ಇಡೀ ರಾಷ್ಟ್ರವೇ ಲಾಕ್ ಡೌನ್ ಆಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಇಂತಹ ಕಷ್ಟಕರ ಸಮಯದಲ್ಲಿ ಪ್ರಾಣಿಪಕ್ಷಿಗಳನ್ನು ರಕ್ಷಿಸುವುದು ಸಹ ನಮ್ಮ ಕರ್ತವ್ಯ. ಹೀಗಾಗಿ ಮೂಕಪ್ರಾಣಿಗಳನ್ನು ರಕ್ಷಿಸುವುಲ್ಲಿ ನಿರಂತರವಾಗಿ ಕಳೆದ 13 ದಿನಗಳಿಂದ ಮೈಸೂರಿನ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಬೀದಿ ಬದಿಯ ಪ್ರಾಣಿಗಳಿಗೆ ಆಹಾರ ನೀಡುತ್ತಾ ಬಂದಿದೆ.
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಸದಸ್ಯರು ಮಹಾರಾಜ ಮೈದಾನ, ಚಾಮುಂಡಿಬೆಟ್ಟ ತಪ್ಪಲು ಹಾಗೂ ಮೈಸೂರಿನ ಸುತ್ತಮುತ್ತ ಪ್ರದೇಶಗಳಲ್ಲಿ ತೆರಳಿ ಪ್ರಾಣಿಗಳಿಗೆ ಬಿಸ್ಕೆಟ್, ಬ್ರೆಡ್ ಹಾಲು ನೀರು ಹಾಗೂ ಆಹಾರ ಪದಾರ್ಥಗಳನ್ನು ನೀಡುತ್ತಿದ್ದಾರೆ.
ಹಾಗೆಯೇ ಲಾಕ್ ಡೌನ್ ಮುಗಿಯುವವರೆಗೂ ಈ ಕಾರ್ಯ ಮುಂದುವರಿಯಲಿದೆ. ದಯಮಾಡಿ ಸಾರ್ವಜನಿಕರಲ್ಲಿ ವಿನಂತಿ ನಿಮ್ಮ ಮನೆಯ ಮುಂಭಾಗ ಪ್ರಾಣಿ ಪಕ್ಷಿಗಳಿಗೆ ನೀರು ಆಹಾರವನ್ನು ಕೊಡುವ ಮೂಲಕ ಮೂಕ ಪ್ರಾಣಿ ಪಕ್ಷಿಗಳಿಗೂ ಆಹಾರವನ್ನು ನೀಗಿಸುವಲ್ಲಿ ಮುಂದಾಗಿ ಎಂದು ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಕೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯರಾದ ಎಂಡಿ ಪಾರ್ಥ ಸಾರಥಿ , ವಿಕ್ರಮ ಅಯ್ಯಂಗಾರ್ , ಕಲಾವಿದರಾದ ಪವನ್ ತೇಜ್ , ಹರೀಶ್ ನಾಯ್ಡು ಹಾಗೂ ಇನ್ನಿತರರು ಹಾಜರಿದ್ದರು.