ಕೊರೋನಾ 2ನೇ ಅಲೆ ಅಂತ್ಯದ‌ ಮುನ್ನವೇ 3ನೇ ಅಲೆಗೆ ಸಜ್ಜಾದ JSS ಆಸ್ಪತ್ರೆ!

1 min read

ಮೈಸೂರು: ಮೈಸೂರಿನಲ್ಲಿ ಕೊರೊನಾ ಎರಡನೆ ಅಲೆ ಅಂತ್ಯಕ್ಕೂ ಮುಂಚೇಯೆ ಮೂರನೆ ಅಲೆಗೆ JSS ಆಸ್ಪತ್ರೆ ಸಿದ್ದವಾದಗಿದೆ. ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಮೂರನೆ ಅಲೆ ಎದುರಿಸಲು ಸೌಲಭ್ಯ ಹೆಚ್ಚಳ ಮಾಡಲಾಗಿದೆ.

ಇಂದು JSS ಆಸ್ಪತ್ರೆಯಲ್ಲಿ ಎರಡನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ನಂತರ ಆಡಳಿತ ಮಂಡಳಿ‌ ಜೊತೆ ಸಭೆ ನಡೆಸಿದರು.

https://twitter.com/i/status/1394198387398832129

ಸಭೆಯಲ್ಲಿ ಮಾಹಿತಿ ನೀಡಿದ ಅವರು ಜೆಎಸ್‌ಎಸ್ ಆಸ್ಪತ್ರೆಯಿಂದ ಸರ್ಕಾರಕ್ಕೆ 411 ಬೆಡ್ ನೀಡಲಾಗಿದೆ. ಸರ್ಕಾರ ಮತ್ತೆ 300 ಬೆಡ್ ಕೇಳಿದ್ದರು. ಆದ್ರೆ ಅದಕ್ಕೆ ಬೇಕಾದ ಆಕ್ಸಿಜನ್ ಇಲ್ಲದ ಕಾರಣ ಬೆಡ್ ನೀಡಿಲ್ಲ. ಆಕ್ಸಿಜನ್ ಬಂದ ತಕ್ಷಣ ಬೆಡ್ ನೀಡ್ತೆವೆ ಎಂದರು.

5000kl ಯೂನಿಟ್ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್ ಖರೀದಿ ಮಾಡ್ತಿದ್ದೀವಿ. ನಿಮಿಷಕ್ಕೆ 500ಲೀ ಆಕ್ಸಿಜನ್ ಉತ್ಪಾದಿಸುವ ಜನರೇಟರ್ ಸಹ ಖರೀದಿಗೆ ಸಿದ್ದತೆ ನಡೆದಿದೆ. ಇಷ್ಟು ಆಕ್ಸಿಜನ್ ಸಿಕ್ಕಿದ್ದರೆ ಇನ್ನು 500-600 ಬೆಡ್ ಹೆಚ್ಚಳವಾಗಲಿದೆ. ಮೂರನೆ ಅಲೆ ಬಂದರೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಅಂತ ಈ ಸಿದ್ದತೆ ಮಾಡಿಕೊಳ್ತಿದ್ದೇವೆ.

ಸೌಲಭ್ಯ ಹೆಚ್ಚಿಸಿ ಚಿಕಿತ್ಸೆ ನೀಡಬಹುದು ಆದ್ರೆ 100% ಆರೋಗ್ಯ ನೀಡಲು ಸಾಧ್ಯವಿಲ್ಲ. ಜನರು ತಮ್ಮ ಎಚ್ಚರಿಕೆಯಿಂದ ಇದ್ದು ಕೊರೊನಾದಿಂದ ಪಾರಾಗಿ. ಸರ್ಕಾರಕ್ಕೆ ಆಸ್ಪತ್ರೆಯಿಂದ ನೀಡಬಹುದಾದ ಎಲ್ಲ ಸಹಕಾರ ನೀಡುತ್ತೇವೆ ಅಂತ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಸುತ್ತೂರು ಶ್ರೀ ಹೇಳಿಕೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *