ಮೈಸೂರಿನಲ್ಲಿ ಕಂಟ್ರೋಲ್ ತಪ್ಪುತ್ತಿದಿಯಾ ಕೊರೊನಾ..? ಹಾಸಿಗೆ ಭರ್ತಿ, ವೆಂಟಿಲೆಟರ್ ಫುಲ್..!
1 min readಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಕಂಟ್ರೋಲ್ ತಪ್ಪುತ್ತಿದಿಯಾ ಎಂಬ ಅನುಮಾನ ಮೂಡಿದ್ದು, ಮೈಸೂರು ಜಿಲ್ಲಾಸ್ಪತ್ರೆ ಹಾಗೂ ಕೆಆರ್.ಆಸ್ಪತ್ರೆಯಲ್ಲಿ ಹಾಸಿಗೆಗಳು ಭರ್ತಿಯಾಗಿದೆ.
ಮೈಸೂರು ಜಿಲ್ಲಾಸ್ಪತ್ರೆ ಹಾಗೂ ಕೆಆರ್.ಆಸ್ಪತ್ರೆಯಲ್ಲಿ ಹಾಸಿಗೆಗಳು ಭರ್ತಿ ಆಗ್ತಿದ್ದು ನಮ್ಮಲ್ಲಿ ಹಾಸಿಗೆ ಭರ್ತಿ, ವೆಂಟಿಲೆಟರ್ ಫುಲ್ ಎಂದು ಆಸ್ಪತ್ರೆ ಆವರಣದಲ್ಲಿ ಬೋರ್ಡ್ ಹಾಕಲಾಗಿದೆ.
ಇನ್ನು ಕೊರೊನಾ ರೋಗಿಗಳಿಂದ ವೆಂಟಿಲೇಟರ್‌ಗಳು ಭರ್ತಿಯಾಗಿದೆ. ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ 405 ಮಂದಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು. ಎಲ್ಲಾ ಬಗೆಯ 70 ವೆಂಟಿಲೇಟರ್‌ಗಳು ಭರ್ತಿಯಗಿದೆ.
ಅಲ್ಲದೆ ಜಿಲ್ಲಾಸ್ಪತ್ರೆ, ಕೆಆರ್.ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ ಸೇರಿ 54 ICU ಗಳು ಫುಲ್ ಆಗಿದೆ.
ಜನ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತುಂಬಾ ಕಷ್ಟವಾಗಲಿದೆ. ಕೊರೊನಾ ಸೋಂಕಿತರು ಬೆಂಗಳೂರಿನಿಂದ ಬೆಡ್ ಗಾಗಿ ಮೈಸೂರಿಗೆ ಬರುತ್ತಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ.