ಬಿತ್ತನೆ ಮಾಡಿ ಎರಡು ತಿಂಗಳಾದರು ಮೊಳಕೆಯೊಡೆಯದ ಬೀಜ: ಕಳಪೆ ಬಿತ್ತನೆ ಬೀಜ ಮಾರಾಟ ಆರೋಪ
1 min readಮೈಸೂರು: ಬಿತ್ತನೆ ಮಾಡಿ ಎರಡು ತಿಂಗಳಾದರು ಬೀಜ ಮೊಳಕೆಯೊಡೆಯದ ಕಾರಣ ರೈತರೊಬ್ಬರು ಕಳಪೆ ಬಿತ್ತನೆ ಬೀಜ ಮಾರಾಟ ಆರೋಪ ಮಾಡಿದ್ದಾರೆ.
ಮೈಸೂರು ಜಿಲ್ಲೆ ಎಚ್. ಡಿ.ಕೋಟೆ ತಾಲ್ಲೂಕಿನ ಹೆಚ್. ಮಟಗೇರಿ ಗ್ರಾಮದ ಮೊಹಮ್ಮದ್ ದಸ್ತಗಿರಿ ಎಂಬ ರೈತನಿಂದ ಆರೋಪ ಕೇಳಿಬಂದಿದೆ. ಹತ್ತು ಎಕರೆ ಕೃಷಿ ಭೂಮಿಯಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಿ ರೈತ ಕಂಗಾಲಾಗಿದ್ದಾರೆ.
ಮೊಹಮ್ಮದ್ ದಸ್ತಗಿರಿ ಅವರು ರಾಯಲ್ ಗೋಲ್ಡ್ ಎಂಬ ಹೆಸರಿನ ಬಿತ್ತನೆ ಬೀಜ ಖರೀದಿ ಮಾಡಿದ್ದರು. ಎಚ್ .ಡಿ.ಕೋಟೆ ಪಟ್ಟಣದ ಖಾಸಗಿ ಟ್ರೇಡರ್ಸ್ ನಲ್ಲಿ ರಾಯಲ್ ಗೋಲ್ಡ್ ಮುಸುಕಿನ ಜೋಳದ ಬೀಜವನ್ನು ಖರೀದಿ ಮಾಡಿದ್ದರು. ಬಿತ್ತನೆ ಮಾಡಿ ಎರಡು ತಿಂಗಳಾದರು ಬೀಜ ಮೊಳಕೆಯೊಡೆದಿಲ್ಲ. ಹೀಗಾಗಿ ನ್ಯಾಯಕೊಡಿಸುವಂತೆ ರೈತನ ಮನವಿ ಮಾಡಿದ್ದಾರೆ.
ಬಿತ್ತನೆ ಬೀಜ ಹಾಗೂ ಉಳಿಮೆ ಖರ್ಚು ಎಲ್ಲಾ ಸೇರಿ ಎರಡು ಲಕ್ಷ ನಷ್ಟವಾಗಿರುವುದಾಗಿ ಅಳಲು ತೋಡಿಕೊಂಡಿದ್ದಾರೆ. ಕಂಪನಿಯಿಂದ ತನಗೆ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ. ಬಿತ್ತನೆ ಮಾಡಿ ಎರಡು ತಿಂಗಳಾದರು ಬಿತ್ತನೆ ಬೀಜ ಮೊಳಕೆ ಬಾರದ ಕಾರಣ ಹತ್ತು ಎಕ್ಕರೆಯನ್ನೆ ಮತ್ತೆ ಉಳುಮೆ ಮಾಡಿದ್ದಾರೆ.