ಕೊರೋನಾಗೆ ಮೈಸೂರಿನ ಇಂಜಿನಿಯರ್ ಬಲಿ
1 min readಮೈಸೂರು: ಮಹಾಮಾರಿ ಕೊರೋನಾಗೆ ಮೈಸೂರಿನ ಇಂಜಿನಿಯರ್ ಬಲಿಯಾಗಿದ್ದಾರೆ. ಮೈಸೂರಿನ ಆಲನಹಳ್ಳಿ ಬಡಾವಣೆ ನಿವಾಸಿ ನವೀನ್ ಕುಮಾರ್ ಮೃತ ದುರ್ಧೈವಿ.
2 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವೀನ್ ಕುಮಾರ್ ಬೆಂಗಳೂರಿನ ಜೈನ್ ವಿವಿಯಲ್ಲಿ ಕೆಲಸ ಮಾಡ್ತಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನವೀನ್ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದರು.
ಮೈಸೂರಿಗೆ ಬಂದ ವೇಳೆ ಕರೋನಾ ತಪಾಸಣೆ ಮಾಡಿಸಿದ್ದರು. ಈ ವೇಳೆ ನವೀನ್ಗೆ ಪಾಸಿಟಿವ್ ಎಂದು ವರದಿ ಬಂದಿದೆ. ಆಸ್ಪತ್ರೆಗೆ ದಾಖಲಾದ್ರು ಚಿಕಿತ್ಸೆ ಫಲಕಾರಿಯಾಗದೆ ನವೀನ್ ಸಾವನ್ನಪ್ಪಿದ್ದಾರೆ.