ವೆಂಟಿಲೇಟರ್ ಬೆಡ್ ಕೇಳಿದ್ದಕ್ಕೆ ಅಸಹಾಯಕರಾದ ಮೈಸೂರು DHO ಅಮರ್ನಾಥ್
1 min readಮೈಸೂರು: ಮೈಸೂರು ಜಿಲ್ಲಾ ಆರೋಗ್ಯ ಅಧಿಕಾರಿ(DHO) ಅಮರ್ನಾಥ್ ರೋಗಿಯೊಬ್ಬರ ಸಂಬಂಧಿಕರ ಜೊತೆಯ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ಆಡಿಯೋದಲ್ಲಿ ಡಿಹೆಚ್ಓ ಅಮರ್ನಾಥ್ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ವೆಂಟಿಲೇಟರ್ ಕೇಳಿದ್ದಕ್ಕೆ ನನ್ನ ಕೈ ಸೋತೋಗಿದೆ’ ನನ್ನ ಹೆಂಡತಿಗೆ ವೆಂಟಿಲೇಟರ್ ಕೊಡಿಸಲು ನನಗೆ ಯೋಗ್ಯತೆ ಇಲ್ಲ. ನೀವೂ ಯಾರಿಗೆ ಬೇಕಾದ್ರು ಕಂಪ್ಲೇಂಟ್ ಕೊಡಿ. ನನ್ನನ್ನ ಇವತ್ತೆ ಮನೆಗೆ ಕಳುಹಿಸಿದರು ನಾನು ಹೋಗಲು ರೆಡಿ ಎಂದು ರೋಗಿ ಸಂಬಂಧಿಕರೊಬ್ಬರ ಜೊತೆ ಸಂಭಾಷಣೆಯ ನಡೆಸಿದ್ದಾರೆ.
ನನಗೆ ಮನೆಗೆ ಕಳುಹಿಸಿದ್ರು ನಾನು ಹೋಗಲು ರೆಡಿ. ನಾನು ಎಲ್ಲಿಂದ ವೆಂಟಿಲೇಟರ್ ತಂದು ಕೊಡಲು. ದಯವಿಟ್ಟು ನನಗೆ ಕ್ಷಮಿಸಿಬಿಡಿ ನನ್ನಿಂದ ವೆಂಟಿಲೇಟರ್ ಅರೆಂಜ್ ಮಾಡಲು ಆಗಲ್ಲ. ವೆಂಟಿಲೇಟರ್ ಎಲ್ಲಿದೆ ಎಂದು ನನಗೇನು ಗೊತ್ತು? ವಾರ್ ರೂಂ ಅವರಿಗೆ ಗೊತ್ತಿರುತ್ತೆ- ನನಗೆ ಗೊತ್ತಿಲ್ಲ. ನನಗು ಬೆಡ್ಗು ಸಂಬಂಧ ಇಲ್ಲ- ಯಾರಿಗಾದ್ರು ಕಂಪ್ಲೇಂಟ್ ಕೊಡಿ ನನ್ನ ಮೇಲೆ. ನಾನ್ ರೆಡಿ ಇದ್ದಿನಿ ಕಳುಹಿಸಿಬಿಡಿ ನನಗೆ. ಸರ್ಕಾರಿ ಬೆಡ್ ಮಾತ್ರ ನನ್ನ ಜವಬ್ದಾರಿ- ಬೇರೆ ಕಡೆದು ಗೊತ್ತಿಲ್ಲ. ಇಎಸ್ಐ ಆಸ್ಪತ್ರೆಯಲ್ಲಿ ಬೆಡ್ ಅರೆಂಜ್ ಮಾಡೋಕೆ ನಾನು ಬೇಕಾದಷ್ಟು ಕಷ್ಟಪಟ್ಟಿದ್ದೇವೆ. ಆ ಕಷ್ಟ ನಿಮಗೆ ಗೊತ್ತಿಲ್ಲ- ನಮ್ಮ ಕೈನಲ್ಲಿ ಏನು ಇಲ್ಲ ಎಂಬ ಮೈಸೂರು ಡಿಹೆಚ್ಓ ಅಸಹಾಯಕ ಹೇಳಿಕೆ ವೈರಲ್ ಆಗಿದೆ.