September 9, 2024

ಕೋವಿಡ್ ಪಾಸಿಟಿವ್ ಆದವರು ಅನಗತ್ಯವಾಗಿ ಹೊರಗೆ ಬಂದ್ರೆ ಎಫ್ಐಆರ್‌

1 min read

ಮೈಸೂರು: ಕೋವಿಡ್ ಪಾಸಿಟಿವ್ ಆದವರು ಅನಗತ್ಯವಾಗಿ ಹೊರಗೆ ಬಂದ್ರೆ ಎಫ್ಐಆರ್‌ ದಾಖಲಿಸಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಎಚ್ಚರಿಕೆ ನೀಡಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಟೆಸ್ಟ್‌ಗೆ ಕೊಟ್ಟು ಕೊಟ್ಟು ಪಾಸಿಟಿವ್ ಬಂದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಅಂಥವರ ಲೊಕೇಷನ್ ಪತ್ತೆ ಹಚ್ಚಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.

ಲಾಕ್ ಡೌನ್ ಶೇ.100ರಷ್ಟು ಯಶಸ್ವಿಯಾಗಿದೆ‌. ಆದ್ರೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅವಕಾಶ ನೀಡಿರೋದು ಯಡವಟ್ಟು ಆಗಿದೆ. ಪ್ರತಿದಿನವೂ ತರಕಾರ ಅಂಗಡಿ ಓಪನ್ ಆಗ್ತಿವೆ. ಆದ್ರೆ ಜನ ವರ್ಷಪೂರ್ತಿ ಲಾಕ್ ಡೌನ್ ಆಗೋಯ್ತಿನೋ ಅನ್ನುವ ಹಾಗೆ ಕ್ಯೂ ನಿಲ್ಲುತ್ತಿರೋದು ಸಮಸ್ಯೆ. ಲಾಕ್ ಡೌನ್ ಬೇಕೋ ಬೇಡ್ವೋ ಅನ್ನುವ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯ ಇಲ್ಲ. 14ರವರೆಗೂ ಈ ನಿಯಮವೇ ಮುಂದುವರಿಯುತ್ತದೆ. 13 ರ ಸಂಜೆ ಮುಂದೆ ಏನ್ ಮಾಡ್ಬೇಕು ಬೇಡ ಅನ್ನೋದನ್ನು ಸಿಎಂ ತಿರ್ಮಾನ ಮಾಡ್ತಾರೆ.

ಮೈಸೂರಿನ ವರ್ತಕರು, ಪೊಲೀಸರು, ಸಂಘ ಸಂಸ್ಥೆಯವರು ಸೇರಿದಂತೆ ಹಲವರಿಂದ ನಾನು ಅಭಿಪ್ರಾಯ ಸಂಗ್ರಹ ಮಾಡ್ತಿದ್ದೀನಿ‌. ಮೈಸೂರಿಗೆ ಏನ್ ಬೇಕೋ ಬೇಡ್ವೋ ಅನ್ನೋದನ್ನು ಸಚಿವ ಸಂಪುಟ ಸಭೆಯಲ್ಲಿ ಸಿಎಂ ಗಮನಕ್ಕೆ ತರುತ್ತೇನೆ ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

About Author

Leave a Reply

Your email address will not be published. Required fields are marked *