ಮೈಸೂರು ಜಿಲ್ಲೆಯಲ್ಲಿ ಕೊರೊನಾ ಕಮ್ಯೂನಿಟಿ ಸ್ಪ್ರೇಡ್ ಆಗಿದೆ: ತಾಲ್ಲೂಕು, ಹಳ್ಳಿಗಳಲ್ಲು ಹೆಚ್ಚಿನ ಕೇಸ್ ಬರ್ತಿದೆ
1 min readಮೈಸೂರು: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಕಮ್ಯೂನಿಟಿ ಸ್ಪ್ರೇಡ್ ಆಗಿದೆ. ತಾಲ್ಲೂಕು ಮಟ್ಟದಲ್ಲಿ, ಹಳ್ಳಿಗಳಲ್ಲು ಹೆಚ್ಚಿನ ಸಂಖ್ಯೆಯ ಪಾಸಿಟಿವ್ ಕೇಸ್ ಬರ್ತಿದೆ ಅಂತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಫೇಸ್‌ಬುಕ್ ಲೈವ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
RTPCR ಟೆಸ್ಟ್‌ನಲ್ಲಿ ತಪ್ಪು ತಪ್ಪು ರಿಸಲ್ಟ್ ಬರ್ತಿದೆ. ಮಾಡಿದ ಟೆಸ್ಟಿಂಗ್‌ನ 30% ರಿಸಲ್ಟ್ ತಪ್ಪಾಗಿ ಕಂಡುಬಂದಿದೆ. ಇದೆ ಕಾರಣದಿಂದ ನೆಗೆಟಿವ್ ಬಂದವರಲ್ಲು ಸೋಂಕು ಉಳಿದು ಅವರು ಸಾವಿಡಿದಾಗ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಟೆಸ್ಟಿಂಗ್ ಕಡಿಮೆ ಮಾಡಿದ್ದೇವೆ. ಮೈಸೂರಿನಲ್ಲಿ ಹೆಚ್ಚು ರ‌್ಯಾಪಿಡ್ ಟೆಸ್ಟ್ ಮಾತ್ರ ಮಾಡುತ್ತಿದ್ದೇವೆ ಎಂದು ಟೆಸ್ಟಿಂಗ್ ಕಡಿಮೆ ಮಾಡಿದ್ದಕ್ಕೆ ಡಿಸಿ ರೋಹಿಣಿ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಈವರೆಗೆ 18 ಸಾವಿರ ಆಕ್ಟಿವ್ ಕೇಸ್ ಇದೆ. 20 ದಿನದ ಹಿಂದೆ ತಾಲ್ಲೂಕುಗಳಲ್ಲಿ 10%, ನಗರದಲ್ಲಿ 90% ಪಾಸಿಟಿವ್ ಇತ್ತು. ಆದ್ರೆ ಇಂದಿನ ಅಂಕಿಅಂಶದ ಪ್ರಕಾರ 50% ಪಾಸಿಟಿವ್ ತಾಲ್ಲೂಕಿನಿಂದಲೇ ಬಂದಿದೆ. ಇದರ ಅರ್ಥ ಸೋಂಕು ಕಮ್ಯೂನಿಟಿ ಸ್ಪ್ರೇಡ್ ಹಂತ ತಲುಪಿ ಆಗಿದೆ. ಇದಕ್ಕಾಗಿ ನಾವು ಪಂಚಸೂತ್ರ ಎಂಬ ಕಾರ್ಯಕ್ರಮದೊಂದೊಂದಿಗೆ ಕೋವಿಡ್ ಮಿತ್ರ ಆರಂಭಿಸಿದ್ದೇವೆ.
ತಾಲ್ಲೂಕಿನಲ್ಲಿರುವ 150 PHCಗಳನ್ನ ಕೋವಿಡ್ ಮಿತ್ರ ಮಾಡಿದ್ದೇವೆ. ಮೊದಲ 5 ದಿನ ಔಷಧಿ ಪಡೆಯೋದು ಹೋಂ ಐಸೋಲೇಷನ್‌ನಲ್ಲೆ ಇರೋದು ಇದರ ಮುಖ್ಯ ಉದ್ದೇಶ.
ನನ್ನ ಕುಟುಂಬದಲ್ಲೆ ಎಲ್ಲರಿಗು ಪಾಸಿಟಿವ್ ಆಗಿತ್ತು. ನನ್ನೋಬ್ಬಳಿಗೆ ನೆಗೆಟಿವ್ ಆಗಿತ್ತು. ನಾವು ಸಹ ಮೊದಲ 5 ದಿನ ಔಷಧೋಪಚಾರ ಮಾಡಿಕೊಂಡಿದ್ದೇವೆ. ನನ್ನನ್ನು ಸೇರಿದಂತೆ ಎಲ್ಲರು ಮಾತ್ರೆ ಔಷಧಿ ಪಡೆದುಕೊಂಡೇವು. ಈಗ ನಮ್ಮ ಮನೆಯಲ್ಲಿ ಎಲ್ಲರು ಗುಣಮುಖರಾಗುತ್ತಿದ್ದಾರೆ. ಹಾಗಾಗಿ ಸರ್ಕಾರ ಸೂಚಿಸಿದ ಮಾತ್ರೆಗಳನ್ನ ಸೇವಿಸಬೇಕು. ಇದು ನನಗೆ ನನ್ನ ಕುಟುಂಬದ ಸೋಂಕಿನಿಂದ ಅನುಭವ ಎಂದು ತಿಳಿಸಿದರು.
ಸದ್ಯ ಮೈಸೂರಿನಲ್ಲಿ 9 ಸಾವಿರ ಜನ ಹೋಂ ಐಸೋಲೇಷನ್ ಇದ್ದಾರೆ. ಕೋವಿಡ್ ಮಿತ್ರ ಕಾರ್ಯಕ್ರಮ ಎಲ್ಲರ ಮನೆಗೆ ತಲುಪಬೇಕು. ಪ್ರೈಮರಿ ಸಂಪರ್ಕದವರು ಮೆಡಿಸನ್ ತೆಗೆದುಕೊಳ್ಳಬೇಕು. ಮೈಸೂರು ಜಿಲ್ಲೆಯಲ್ಲಿ 68% ವಾಕ್ಸಿನ್ ಹಾಕಲಾಗಿದೆ. 95% ಕೋವಿಶಿಲ್ಡ್ 5% ಕೋವಾಕ್ಸಿನ್ ಕೊಟ್ಟಿದ್ದೀವಿ. ಸದ್ಯಕ್ಕೆ 20 ಸಾವಿರ ವಾಕ್ಸಿನ್ ಜಿಲ್ಲೆಯಲ್ಲಿ ಇದೆ. ಎರಡನೆ ಡೋಸ್ ಪಡೆಯುವವರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ.
ಹೆಚ್ಚು ದಿನದ ಹಾಸ್ಪಿಟಲ್‌ನಲ್ಲಿ ಇದ್ದರೆ ಬ್ಲಾಕ್ ಫಂಗಸ್ ಬರುತ್ತೆ. ಸ್ಟೀರಾಯ್ಡ್ ಔಷಧಿಗಳಿಂದ ಬ್ಲಾಕ್ ಫಂಗಸ್ ಬರುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರ ಸೂಚಿಸಿ ಮಾತ್ರೆ ಮತ್ತು ಔಷಧಿಗಳನ್ನ ಮಾತ್ರ ಸೇವಿಸಿ ಎಂದು ಬ್ಲಾಕ್ ಫಂಗಸ್ ಬಗ್ಗೆ ರೋಹಿಣಿ ಸಿಂಧೂರಿ ಆತಂಕ ವ್ಯಕ್ತಪಡಿಸಿದರು.