ಮದುವೆ ಹಣವನ್ನ ಕೋವಿಡ್ ನಿರ್ವಹಣೆಗೆ ನೀಡಿ ಸರಳ ಮದುವೆಯಾದ ಮೈಸೂರಿನ ಜೋಡಿ
1 min readಮೈಸೂರು: ಕೊರೊನ ಸಂಕಷ್ಟದಲ್ಲಿ ಮೈಸೂರಿನ ಕುಟುಂಬವೊಂದು ಮಾದರಿ ಕೆಲಸ ಮಾಡಿದೆ. ಕುಟುಂಬದವರು ಮದುವೆಗೆಂದು ಇಟ್ಟಿದ್ದ ಹಣವನ್ನ ಕೋವಿಡ್ ನಿರ್ವಹಣೆಗೆ ನೀಡಿ ಸರಳ ಮದುವೆ ಮಾಡಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕಿನ ಬಿ.ಜೆ ದೇವರಾಜು ಎಂಬುವವರ ಮಗನ ಮದುವೆಯ ಎರಡು ಲಕ್ಷ ರೂ ಮದುವೆ ಹಣವನ್ನ ಕೊರೊನ ಸೋಂಕಿತರ ಮೆಡಿಷನ್ ಗೆ ಹಸ್ತಾಂತರಿಸಿದೆ. ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ಗೆ ದೇವರಾಜು ಕುಟುಂಬ ಹಸ್ತಾಂತರಿಸಿದೆ. ತಾಲ್ಲೂಕಿನ ಕೊರೊನ ಸೋಂಕಿತರ ಔಷದಿಗೆ ಬಳಸಲಿ ಎಂದು ಕುಟುಂಬ ಹೇಳಿದೆ.
ನಿನ್ನೆ ನಡೆದ ಬಿ.ಡಿ ರತನ್ ಗೌಡ ಹಾಗೂ ಸೋನುಗೌಡ ಅವರ ಸರಳ ವಿವಾಹದಲ್ಲಿ 2ಲಕ್ಷ ರೂ ಹಣವನ್ನ ಮಹದೇವ್ ಅವರಿಗೆ ಹಸ್ತಾಂತರ ಮಾಡಲಾಗಿದೆ. ಈ ವೇಳೆ ಶ್ರೀಮಂತರೆಲ್ಲ ಇದೆ ಮಾದರಿ ಅನುಸರಿಸಲಿ ಎಂದು ಶಾಸಕ ಕೆ.ಮಹದೇವ್ ಸಲಹೆ ನೀಡಿದ್ದಾರೆ.