ಹಿರಿಯ ನಾಗರೀಕರು, ವೃದ್ಧರ ನೆರವಿಗೆ ನಿಂತ ಮೈಸೂರು ನಗರ ಪೊಲೀಸರ ಅಭಯ ಟೀಂ
1 min readಮೈಸೂರು: ಲಾಕ್ ಡೌನ್ ಹಿನ್ನೆಲೆ, ಮೈಸೂರಿನ ಹಿರಿಯ ನಾಗರೀಕರಿಗೆ ಮೈಸೂರು ನಗರ ಪೊಲೀಸರ ಸಹಾಯ ಮಾಡಲು ಮುಂದಾಗಿದ್ದಾರೆ.
ಹಿರಿಯ ನಾಗರೀಕರು, ವೃದ್ಧರ ನೆರವಿಗೆ ಅಭಯ ಟೀಂ ನಿಂತಿದೆ. ಸಂಕಷದಲ್ಲಿರುವ ಹಿರಿಯ ನಾಗರೀಕರು ಹಾಗೂ ವೃದ್ಧರಿಗೆ ನೆರವಾಗುವಂತೆ ಪೊಲೀಸ್ ಆಯುಕ್ತ ಚಂದ್ರಗುಪ್ತ ಸೂಚನೆ ನೀಡಿದ್ದಾರೆ.
ಅಗತ್ಯವಸ್ತು ಖರೀದಿಗೆ ಕಷ್ಟಪಡುವ ಹಿರಿಯ ನಾಗರೀಕರು. ಪೊಲೀಸ್ ಕಂಟ್ರೋಲ್ ರೂಂ 0821-2418340ಗೆ ಕರೆ ಮಾಡಿ ಮಾಹಿತಿ ನೀಡಿದ್ರೆ ಸಾಕು. ಹತ್ತಿರದ ಪೊಲೀಸ್ ಠಾಣೆ ಅಥವಾ ಅಭಯ ಯೋಜನಗೆ ನಿಯೊಜನೆಗೊಂಡ ಪೊಲೀಸರಿಂದ ಸಹಾಯ ದೊರೆಯಲಿದೆ. ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.