ನಮಗೆ ರೋಗ ಇಲ್ಲ’ ನಾವು ಚೆಕ್ ಮಾಡಿಸ್ಕೋಳಲ್ಲ: ಅಧಿಕಾರಿಗೆ ಆದಿವಾಸಿ ಮಹಿಳೆ ಧಮ್ಕಿ
1 min readಮೈಸೂರು: ನಮಗೆ ರೋಗ ಇಲ್ಲ’ ನಾವು ಚೆಕ್ ಮಾಡಿಸ್ಕೋಳಲ್ಲ ಅಂತ ಅಧಿಕಾರಿಗಳಿಗೆ ಆದಿವಾಸಿ ಮಹಿಳೆಯೊಬ್ಬರು ಧಮ್ಕಿ ಹಾಕಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಹಣಸೂರು ತಾಲೂಕಿನ ಹನಗೂಡಿನ ಬೀರತಮ್ಮನ ಹಳ್ಳಿ ಹಾಡಿಯಲ್ಲಿ ಘಟನೆ ಜರುಗಿದೆ. ವೈದ್ಯರ ನಡಿಗೆ ಹಳ್ಳಿ ಕಡೆಗೆ’ ಕಾರ್ಯಕ್ರಮದಡಿ ಹಳ್ಳಿಗೆ ಭೇಟಿ ನೀಡಿದ ವೇಳೆ ಆದಿವಾಸಿ ಮಹಿಳೆಯಿಂದ ಅಧಿಕಾರಿಯ ಜೊತೆ ವಾಗ್ವಾದ ನಡೆದಿದೆ.
ನಮ್ಮ ಹಾಡಿಯಲ್ಲಿ ಯಾರಿಗು ಖಾಯಿಲೆ ಇಲ್ಲ. ಹಾಗೆನಾದ್ರು ಇದ್ದರೆ ಅವರನ್ನ ಕರೆದುಕೊಂಡು ಹೋಗಿ ಒಳಗೆ ಹಾಕಿ. ನಮಗೆ ಯಾವುದೇ ಖಾಯಿಲೆ ಇಲ್ಲ, ತಪಾಸಣೆ ಮಾಡ್ಸಲ್ಲ ಸೂಜಿನು ಹಾಕ್ಸಲ್ಲ. ನಾವು ಊಣ್ಣೋದು ರಾಗಿ ಹಿಟ್ಟು, ಆರೋಗ್ಯವಾಗಿದ್ದೀವಿ’ ಚೆನ್ನಾಗಿದ್ದೀವಿ. ಏನಾದ್ರು ರೋಗ ಬಂದ್ರೆ ನಾವೇ ವಾಸಿ ಮಾಡ್ಕೋತ್ತೀವಿ. ನಾನು ಕೋವಿಡ್ ಇಂಜೆಕ್ಷನ್ ಹಾಕಿಸ್ಕೊಂಡಿದ್ದೀನಿ. ನಾನು ಚೆನ್ನಾಗಿದ್ದೀನಿ, ಏ ನೀವೂ ಹೇಳ್ರೆ ಎಂದು ಇತರೆ ಮಹಿಳೆಗೆ ಆದಿವಾಸಿ ಮಹಿಳೆ ಸೂಚಿಸಿದ್ದಾರೆ.
ನೋಡಿ ನಾನು ಮಾತಾಡ್ತಿಲ್ವ? ಸತ್ತೋಗಿದ್ದೀನಾ, ಚೆನ್ನಾಗಿಲ್ವಾ? ವಾಕ್ಸಿನ್ ಪಡೆದ ಬಗ್ಗೆ ಆರೋಗ್ಯ ವಿಚಾರಿಸಿದ ಅಧಿಕಾರಿಗೆ ಮಹಿಳೆ ಏರು ಧ್ವನಿಯಲ್ಲಿ ಹೇಳಿಕೆ ನೀಡಿದ್ದಾರೆ. ನಮಗೆ ಇಲ್ಲಿ ಸಮಸ್ಯೆ ಇದೆ ಎಂದು ದೂರ ಬಂದಿದೆ ಎಂದ ಅಧಿಕಾರಿ. ಯಾರು ದೂರು ಕೊಟ್ರು, ಯಾರಿಗೆ ಸಮಸ್ಯೆ ಇದೆ ಅವರಿಗೆ ಕರೆದುಕೊಂಡು ಹೋಗಿ. ನಮ್ಮೂರಿನಲ್ಲಿ ಯಾವುದೇ ರೋಗ ಇಲ್ಲ, ನೀವೂ ಬರಬೇಡಿ ಎಂದ ಮಹಿಳೆ.
ವೈದ್ಯರ ನಡಿಗೆ ಹಳ್ಳಿ ಕಡೆಗೆ’ ಕಾರ್ಯಕ್ರಮದಡಿ ಹಳ್ಳಿಗೆ ಭೇಟಿ ನೀಡಿದ ವೇಳೆ ಆದಿವಾಸಿ ಮಹಿಳೆಯಿಂದ ಅಧಿಕಾರಿಯ ಜೊತೆ ವಾಗ್ವಾದ ನಡೆದಿದೆ. ಈ ವೇಳೆ ಕೇವಲ 7 ಮಂದಿಗೆ ಮಾತ್ರ ಕೋವಿಡ್ ತಪಾಸಣೆ ಮಾಡಲಾಗಿದೆ. ಉಳಿದ 250ಕ್ಕು ಹೆಚ್ಚು ಮಂದಿಗೆ ತಪಾಸಣೆ ಮಾಡದೆ ತಂಡ ತೆರಳಿದೆ. ಆ 7 ಮಂದಿಯ ವರದಿ ಕೂಡ ನೆಗಿಟಿವ್ ಆಗಿದೆ ಎಂದು ಹುಣಸೂರು ಆರೋಗ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದ್ದಾರೆ.