ಮೈಸೂರು ಜಿಲ್ಲೆಗೆ ಸಣ್ಣ ಮಟ್ಟದ ಗುಡ್ ನ್ಯೂಸ್- ಕೊಂಚ ಮಟ್ಟದ ಅನ್ಲಾಕ್- ಡಿಸಿ ಬಗಾದಿ ಗೌತಮ್-
1 min readಮೈಸೂರು ಜಿಲ್ಲೆಗೆ ಸರ್ಕಾರದಿಂದ ಲಾಕ್ಡೌನ್ ನಿಂದ ಕೊಂಚ ರಿಲೀಫ್ ನೀಡಿದ್ದು 50 ಪರ್ಸೆಂಟ್ ಕೈಗಾರಿಕೆ ಇಲಾಖೆಗೆ ಅವಕಾಶ ನೀಡಿದ್ದು, ಗಾರ್ಮೆಂಟ್ಸ್ ಗೆ ಬಿಟ್ಟು ಈ ಅನ್ಲಾಕ್ ಮಾಡಲಾಗಿದೆ. ಇನ್ನು ಈಗಿರುವ ಅಂಗಡಿಗಳಿಗೆ ಅಂದರೆ ಅವಶ್ಯಕತೆ ಇರುವ ದಿನಸಿ- ಕಿರಾಣಿ ಅಂಗಡಿ, ಮಾಂಸದಂಗಡಿ, ಹಾಲಿನ ಕೇಂದ್ರ, ಹಣ್ಣಿನ ಅಂಗಡಿಗೆ ಬೆಳಗ್ಗೆ 6 ರಿಂದ 2ಗಂಟೆ ವರೆಗು ಅವಕಾಶ ಕೊಡಲಾಗಿದೆ. ಚಾಟ್ಸ್- ಅಂಗಡಿಗು ಇದೇ ಅವಕಾಶವನ್ನು ಕಲ್ಪಿಸಲಾಗಿದ್ದು ಜನರು ಅನಗತ್ಯವಾಗಿ ಮುಗಿ ಬೀಳದಂತೆ ಡಿಸಿ ಬಗಾದಿ ಗೌತಮ್ ತಿಳಿಸಿದ್ದಾರೆ.
ಅಲ್ಲದೆ ಲಿಕ್ಕರ್ಗೆ ಪಾರ್ಸಲ್ಗೆ ಮಾತ್ರ ಈ ಸಮಯದಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೆ ಹೋಮ್ ಡಿಲಿವರಿ 24 ಗಂಟೆಗಳ ಕಾಲ ಅವಕಾಶ ನೀಡಲಾಗಿದೆ. ಆದರೆ ಎಲ್ಲ ಅಂಗಡಿಗೆ ಅವಕಾಶ ಇಲ್ಲ ಎಂದು ಡಿಸಿ ಮಾಹಿತಿ ನೀಡಿದ್ದಾರೆ. ಆದರೆ ಇಂದಿನಿಂದ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು ಸೋಮವಾರ ಬೆಳಗ್ಗೆ 6 ಗಂಟೆವರೆಗು ಲಾಕ್ಡೌನ್ ಇರಲಿದೆ- ಮದುವೆ ಸಮಾರಂಭಕ್ಕೆ ಅಧಿಕಾರಿಗಳ ಬಳಿ ಅನುಮತಿ ಪಡೆಯಬೇಕಿದ್ದು, 40 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.
ಯಾವುದಕ್ಕೆಲ್ಲ ಅನುಮತಿ ಇಲ್ಲಿದೆ ನೋಡಿ!
ಮೈಸೂರು ಕೊರೊನಾ ಅನ್ಲಾಕ್ ಮಹತ್ವದ ಮಾಹಿತಿ –
ಮೈಸೂರಿನಲ್ಲಿ ಕಡಿಮೆಯಾದ ಪಾಸಿಟಿವಿಟಿ
- 25/06/2021ರಿಂದ ಮೈಸೂರು ಜಿಲ್ಲೆ ಕೆಟಗಿರಿ 2ಕ್ಕೆ ಸೇರಿಸಲಾಗಿದೆ
- ರಾಜ್ಯ ಸರ್ಕಾರದಿಂದ ಆದೇಶ
- ಎಲ್ಲಾ ಕೈಗಾರಿಕೆಗಳು ಶೇಕಡ 50ರಷ್ಟು ಸಿಬ್ಬಂದಿಗೆ ಅವಕಾಶ
- ಗಾರ್ಮೆಂಟ್ಸ್ಗೆ ಶೇಕಡ 30ರಷ್ಟು ಕಾರ್ಮಿಕರಿಗೆ ಅವಕಾಶ
ಅಗತ್ಯ ಮಾರಾಟಕ್ಕೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ
- ಹಣ್ಣುಗಳು ದಿನಸಿ ಮಾಂಸ ಅಗತ್ಯ ವಸ್ತುಗಳ
- ಪಾನಿಪಾರಿ ಬಜ್ಜಿ ತಳ್ಳು ಗಾಡಿಯಲ್ಲಿ ಮಾರುವವರಿಗೂ ಅವಕಾಶ
- ಕಿರಾಣಿ ಅಂಗಡಿಗಳಿಗೆ ಅವಕಾಶ
- ಮದ್ಯದ ಅಂಗಡಿಗಳಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶ
- ಎಲ್ಲಾ ವಸ್ತುಗಳು ಹೋಂ ಡೆಲಿವರಿಗೆ 24/7 ಅವಕಾಶ
- ಹೋಟೆಲ್ಗಳಲ್ಲಿ 24/7 ಪಾರ್ಸೆಲ್ಗೆ ಅವಕಾಶ
- ಕಟ್ಟಡದ ನಿರ್ಮಾಣ ಕಾಮಗಾರಿಯ ಮಾರಾಟ ಮಳಿಗೆಗೂ ಅವಕಾಶ.
- ಕಬ್ಬಿಣದ ಅಂಗಡಿ, ಸಿಮೆಂಟ್, ಹಾರ್ಡ್ವೇರ್ ಸೇರಿ ಎಲ್ಲಾ ಕಟ್ಟಡ ಸಾಮಾಗ್ರಿಗಳ ಅಂಗಡಿಗಳಿಗೆ ಅವಕಾಶ
- ಉದ್ಯಾನವನಗಳಲ್ಲಿ 05 ರಿಂದ 10 ರವರೆಗೂ ಅವಕಾಶ
- ಟ್ಯಾಕ್ಸಿ ಆಟೋಗಳಿಗೆ ಇಬ್ಬರು ಪ್ಯಾಸೆಂಜರ್ ಜೊತೆ ಅವಕಾಶ
- ಸರ್ಕಾರಿ ಕಚೇರಿಗಳು ಶೇಕಡ 50ರಷ್ಟು ಸಿಬ್ಬಂದಿಯೊಂದಿಗೆ ಅವಕಾಶ.
- ತರಬೇತಿಗೆ ಅವಕಾಶ
- ಕನ್ನಡಕದ ಅಂಗಡಿಗಳಿಗೂ ಅವಕಾಶ
- ಮದುವೆಗೆ 40 ಜನಕ್ಕೆ ಅವಕಾಶ ಅನುಮತಿನ ಕಡ್ಡಾಯ
- ಅಂತ್ಯ ಸಂಸ್ಕಾರಕ್ಕೆ 5 ಜನರಿಗೆ ಭಾಗವಹಿಸಲು ಅವಕಾಶ
ಇವತ್ತು 25/06/2021 ಸಾಯಂಕಾಲದಿಂದ ವೀಕೆಂಡ್ ಕರ್ಪ್ಯೂ
- ಮೈಸೂರಿನಲ್ಲೂ ವೀಕೆಂಡ್ ಕರ್ಪ್ಯೂ ಅನ್ವಯ
- ಅಗತ್ಯ ವಸ್ತುಗಳು ಮೆಡಿಕಲ್ ಮಾರಾಟಕ್ಕೆ ಮಾತ್ರ ಅವಕಾಶ.