ಮೈಸೂರಿನಲ್ಲಿ ಅಪರಿಚಿತ ವ್ಯಕ್ತಿಯಿಂದ ಯುವತಿ ಮೇಲೆ‌ ಚಾಕುವಿನಿಂದ ಹಲ್ಲೆ!

1 min read

ಮೈಸೂರು : ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಹಲ್ಲೆ ಮತ್ತು ಅತ್ಯಾಚಾರ ಯತ್ನ ನಡೆಸಲಾಗಿದೆ ಎನ್ನಲಾಗಿದೆ. ನಾಯ್ಡುನಗರದ ಹೋಲಿ ಕ್ರಾಸ್ ಸ್ಡಡಿ ಹೌಸ್ ನಲ್ಲಿ ಹಲ್ಲೆ ಘಟನೆ ಆಗಿದ್ದು, ಯುವತಿಗೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಸದ್ಯ ಯುವತಿ ಆಸ್ಪತ್ರೆಗೆ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳ ಭೇಟಿ ನೀಡಿದ್ದಾರೆ.

ಹಲ್ಲೆ ನಡೆಸಿದ ಸ್ಥಳ

ಮೈಸೂರಿನ ಎನ್.ಆರ್.ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮನೆಯೊಳಗೆ ನುಗ್ಗಿ ಹಲ್ಲೆ ನಡೆಸಿರೋ ಅಪರಿಚಿತ ವ್ಯಕ್ತಿ ಈ ಕೃತ್ಯ ನಡೆಸಿದ್ದಾನೆ. ಯುವತಿಯ ಕೈಗೆ ಚಾಕುವಿನಿಂದ ಚುಚ್ಚಿದ್ದು, ಈ ವೇಳೆ ಯುವತಿ ಚೀರಿಕೊಂಡಿದ್ದಾಳೆ. ಈ ವೇಳೆ ಹಲ್ಲೆ ನಡೆಸಿ ಅಪರಿಚಿತ ವ್ಯಕ್ತಿ ಪರಾರಿಯಾಗಿದ್ದಾನೆ. ಸದ್ಯ ಅಕ್ಕಪಕ್ಕದಲ್ಲಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಕೃತ್ಯದ ದೃಶ್ಯವನ್ನ ಪೊಲೀಸರ ಪರಿಶೀಲನೆ ನಡೆಸುತ್ತಿದ್ದಾರೆ

About Author

Leave a Reply

Your email address will not be published. Required fields are marked *