ಮತ್ತೆ ರೋಹಿಣಿ ಸಿಂಧೂರಿ ವಿರುದ್ದ ಮುಗಿಬಿದ್ದ ಪ್ರತಾಪ್ ಸಿಂಹ: ಸಿಮ್ಮಿಂಗ್ ಪೂಲ್ ಲೆಕ್ಕ ಎಲ್ಲಿ..?

1 min read

ಮೈಸೂರು: ಸಂಸದ ಪ್ರತಾಪ್ ಸಿಂಹ ರೋಹಿಣಿ ಸಿಂಧೂರಿನ ಜಟಾಪಟಿ ವಿಚಾರ ಮತ್ತೆ ರೋಹಿಣಿ ಸಿಂಧೂರಿ ವಿರುದ್ದ ಪ್ರತಾಪ್ ಸಿಂಹ ಮುಗಿಬಿದ್ದಿದ್ದಾರೆ. ಸಿಮ್ಮಿಂಗ್ ಪೂಲ್ ಲೆಕ್ಕ ಎಲ್ಲಿ ಎಂದು ಪ್ರಶ್ನೆ ಹಾಕಿದ್ದಾರೆ.

ನಾನು ಬಹಳ ಲೆಕ್ಕ ಕೇಳಿದ್ದೆ. ಎಲ್ಲದಕ್ಕು ಲೆಕ್ಕ ಕೊಟ್ಟಿದ್ದಾರಾ? ಯಾವುದೋ 2.4.5 ಅಂತ ರೌಂಡ್ ಫಿಗರ್ ಲೆಕ್ಕ ಕೊಡೋದ್ ಅಲ್ಲ. ಲೆಕ್ಕಕೊಡೊದಾದ್ರೆ ವಸ್ತು ಹಾಗೂ ಖರ್ಚಿನ ಲೆಕ್ಕ ಕೊಡಲಿ. ಸ್ಟೆಪ್ ಡೌನ್ ಆಸ್ಪತ್ರೆಗಳ ಬಗ್ಗೆಯೂ ಕೇಳಿದ್ದೆ ಅದ್ಕೆ ಉತ್ತರ ಕೊಟ್ಟಿದ್ದಾರಾ. ಸಿಮ್ಮಿಂಗ್ ಪೂಲ್ ಲೆಕ್ಕ ಕೇಳಿದ್ದೆ, ಅದ್ಕೆ ಕೊಟ್ಟಿದ್ದಾರಾ. ಸುಮ್ಮನೆ ಹೋಟೆಲ್ಗಳಿಗೆ 4 ಕೊಟಿ ಅಂತ ಬರೆಯೋದಲ್ಲ. ಯಾವುದಕ್ಕೆ ಎಷ್ಟು ಅಂತ ಬಿಲ್ ಬೇಕಲ್ವಾ ಎಂದರು.

ಅಭಿರಾಂ ಜಿ ಶಂಕರ್ ಇದ್ದಾಗ ಅವರ ಬಳಿ ಲೆಕ್ಕವನ್ನೇ ಕೇಳಿಲ್ಲ. ಅವರ ಬಳಿ ಪಾರದರ್ಶಕತೆ ಇತ್ತು ಅದಕ್ಕೆ ಕೇಳಲಿಲ್ಲ. ಆದ್ರೆ ಈಗಿನ ಜಿಲ್ಲಾಧಿಕಾರಿಗಳ ಬಳಿ ಪಾರದರ್ಶಕತೆ ಕಾಣುತಿಲ್ಲ ಈಗಾಗಿ ಲೆಕ್ಕ ಕೇಳುತಿದ್ದೆನೆ. ನಾನು ಇನ್ನು ಮುಂದೆ ಯಾರ ಬಗ್ಗೆ ಮಾತಾಡಲ್ಲ. ನನಗೆ ನೀಡಿರುವ ಜವಾಬ್ದಾರಿ ನಾನು ನಿಭಾಹಿಸುತ್ತೆನೆ. ವಾಕ್ಸಿನ್ ಜವಾಬ್ದಾರಿಯನ್ನು ನನ್ನ ಮೇಲೆ ಎಳೆದುಕೊಂಡೆ ಮಾಡುತ್ತೆನೆ. ನನ್ನ‌ ಕೆಲಸಕ್ಕೆ ಬೆರಳು ತೋರಿಸಿ ಯಾರು ಮಾತನಾಡಬಾರದು ಅಷ್ಟೇ ಎಂದು ಹೇಳಿದರು.

ಸಾವಿನ ಲೆಕ್ಕದ ಬಗ್ಗೆ ನನಗೂ ಅನುಮಾನ ಇದೆ:

ಮೈಸೂರು ಜಿಲ್ಲೆಯ ಸಾವಿನ ಲೆಕ್ಕದ ಬಗ್ಗೆ ನನಗೂ ಅನುಮಾನ ಇದೆ. ನಾವು ಹಲವು ಕಡೆ ಪ್ರವಾಸ ಮಾಡುತ್ತಿರುತ್ತವೆ. ಆಗ ಜನರು ಹಲವು ದೂರುಗಳನ್ನು ಹೇಳುತ್ತಿರುತ್ತಾರೆ. ನಾವೇ ಬೆಡ್ ಕೊಡಿಸಿದ ರೋಗಿಗಳಿಗೆ ಐಸಿಯು ಸಿಗದೆ ಸತ್ತಿದ್ದಾರೆ ಅಂತಾರೆ. ಆದರೆ ಜಿಲ್ಲಾಡಳಿತ ಲೆಕ್ಕಕ್ಕು ಅಂತ್ಯ ಸಂಸ್ಕಾರ ನಡೆಯುತ್ತಿರುವುದಕ್ಕೂ ವ್ಯತ್ಯಾಸ ಇದೆ. ಈ ಬಗ್ಗೆ ನನಗೂ ಅನುಮಾನ ಇದೆ ಅಂತ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

ಕೆ.ಆರ್.ಆಸ್ಪತ್ರೆಗೆ ಭೇಟಿ

ಇನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಹಿನ್ನಲೆ, ಪ್ಲಾಂಟ್ ನಿರ್ಮಾಣಕ್ಕೆ ಅನುಮೋದನೆ ದೊರೆತ ಕಾರಣ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿದರು. ಮೈಸೂರು ಮೆಡಿಕಲ್ ಕಾಲೇಜಿನ ಕೆ.ಆರ್ ಆಸ್ಪತ್ರೆಯ ಆವರಣದಲ್ಲಿ 1000 LPM ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲು ಅನುಮೋದನೆ ದೊರೆತಿದೆ. ಸಂಸದ ಪ್ರತಾಪ್ ಸಿಂಹಗೆ ಡೀನ್, ನಿರ್ದೇಶಕರು, MMC, ಪ್ರಾಜೆಕ್ಟ್ ಡೈರೆಕ್ಟರ್ ಸಾಥ್ ನೀಡಿದರು.

ಇದರಿಂದ ಹಳೆ ಮೈಸೂರು ಭಾಗದ ರೋಗಿಗಳಿಗೆ ಅನುಕೂಲ ಆಗಲಿದೆ. ಇದು ರಾಜ್ಯದಲ್ಲೇ ಅತ್ಯಂತ ದೊಡ್ಡ ಆಸ್ಪತ್ರೆ ಆಗಿದೆ. ಆಕ್ಸಿಜನ್ ಕೊರತೆ ನೀಗಿಸಲು ಈ ಪ್ಲಾಂಟ್ ದೊಡ್ಡ ಪ್ರಮಾಣದಲ್ಲಿ ಅನುಕೂಲ ಆಗಲಿದೆ. ಇದು ಶಾಶ್ವತವಾಗಿ ಆಕ್ಸಿಜನ್ ಕೊರತೆಗೆ ನೀಗಿಸಲಿದೆ. ನಿತ್ಯವೂ ಈ ಆಸ್ಪತ್ರೆಗೆ 500 ರಿಂದ 600 ರ ವರೆಗು ರೋಗಿಗಳು ಬರ್ತಾರೆ. ಹಾಗಾಗಿ ಅಕ್ಕಪಕ್ಕದ ಜಿಲ್ಲೆಯ ರೋಗಿಗಳಿಗು ಇದು ಅನುಕೂಲ ಎಂದು ಈ ವೇಳೆ ಮಾಹಿತಿ ನೀಡಿದರು.

About Author

Leave a Reply

Your email address will not be published. Required fields are marked *