ಉದ್ಘಾಟನೆಗೆ ಸಿದ್ಧವಾದ 200 ಹಾಸಿಗೆಯ ತಾಯಿ – ಮಗುವಿನ ಆಸ್ಪತ್ರೆ: ಕೋವಿಡ್ ಆಸ್ಪತ್ರೆಯಾಗಿ ಬಳಕೆ
1 min readಮೈಸೂರು: ಮೈಸೂರಿನಲ್ಲಿ ನಿರ್ಮಾಣವಾದ ಹೊಸದಾದ ಆಸ್ಪತ್ರೆ ಉದ್ಘಾಟನೆಗೆ ಸಿದ್ದವಾಗಿದ್ದು, ಇದೇ ಗುರುವಾದ ಅಧಿಕೃತವಾಗಿ ಉದ್ಘಾಟನೆಯಾಗಲಿದೆ.
ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ಕೇಂದ್ರ ಸರ್ಕಾರದ 20 ಕೋಟಿ ರೂ ಅನುದಾನದಲ್ಲಿ ನಿರ್ಮಾಣವಾಗಿರುವ 200 ಹಾಸಿಗೆಯ ತಾಯಿ ಮತ್ತು ಮಗುವಿನ ಆಸ್ಪತ್ರೆಯನ್ನು ಗುರುವಾರ ಮುಡಾದ ಸಹಯೋಗದೊಂದಿಗೆ ಉದ್ಘಾಟನೆ ಮಾಡಲಾಗ್ತಿದೆ.
ಈಗಾಗಲೇ ಈ ಆಸ್ಪತ್ರೆಯಲ್ಲಿ ಮಾಡಲಾದ ಪೂರ್ವ ಸಿದ್ದತೆಗಳನ್ನ ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳ ಜೊತೆಗೂಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಉದ್ಘಾಟನೆಯಾದ ಬಳಿಕ ಇದೇ ಆಸ್ಪತ್ರೆಯನ್ನ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಿದ್ದು, ಕೋವಿಡ್ ರೋಗಿಗಳಿಗೆ ನೆರವಾಗಲಿದೆ. ಅಲ್ಲದೆ ಪ್ರತಿ ಬೆಡ್‌ಗಳಿಗು ಈಗಾಗಲೇ ಆಕ್ಸಿಜನ್ ವ್ಯವಸ್ಥೆ ಸೇರಿದಂತೆ ವಿದ್ಯುತ್ ಹಾಗೂ ನೀರಿನ ಎಲ್ಲ ಕಾರ್ಯ ಮುಗಿದಿದ್ದು, ಕೆ.ಆರ್ ಕ್ಷೇತ್ರದಲ್ಲಿ ಹೈಟೆಕ್ ಆಸ್ಪತ್ರೆ ಲೋಕಾರ್ಪಣೆಗೊಳಲಿದೆ.