ಮೈಸೂರು : ನನ್ನ ಮೊಬೈಲ್ ಕಳುವಾಗಿದೆ ಹುಡುಕಿಸಿಕೊಡಿ ಸಿಎಂ ಸಾಹೆಬ್ರೆ!
1 min readನನ್ನ ಮೊಬೈಲ್ ಕಳುವಾಗಿದೆ ಹುಡುಕಿಸಿ ಕೊಡುವಂತೆ ಸಿಎಂಗೆ ಪತ್ರ ನರೆದ ವಿಚಿತ್ರ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕುಂದನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಜನತಾ ಬಡಾವಣೆ ನಿವಾಸಿ ಶಿವಣ್ಣ ಎಂಬುವವರೇ ಮೊಬೈಲ್ ಕಳುವಾಗಿದೆ ಎಂದು ಸಿಎಂಗೆ ಪತ್ರ ಬರೆದವರು.
ಘಟನೆ ಹಿನ್ನಲೆ :
ಆಗಸ್ಟ್ 28 ರಂದು ಗ್ರಾಮಾಂತರ ಬಸ್ ನಿಲ್ದಾಣದಿಂದ ಉಡ್‌ಲ್ಯಾಂಡ್ಸ್ ಚಿತ್ರಮಂದಿರದ ಕಡೆ ನಡೆದುಕೊಂಡು ಹೋಗುವಾಗ ವ್ಯಕ್ತಿಯೊಬ್ಬ ಮೊಬೈಲ್ ಕಿತ್ತುಕೊಂಡು ಹೋಗಿದ್ದಾನೆ. ಬಳಿಕ ತಾನು ಮೊಬೈಲ್ ಹುಡುಕಿಕೊಡುವಂತೆ ಲಷ್ಕರ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಆದರೆ ಪೊಲೀಸರು ಇನ್ನೂ ಸಹ ನನ್ನ ಮೊಬೈಲ್ ಹುಡುಕಿಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಪೊಲೀಸ್ ಕಮೀಷನರ್ ಅವರಿಗು ಪತ್ರ ಬರೆದಿದ್ದು ಪ್ರಯೋಜನ ಮಾತ್ರ ಆಗಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಇನ್ನಾದರೂ ಆರೋಪಿಯನ್ನು ಬಂಧಿಸಿ, ನನ್ನ ಮೊಬೈಲ್ ಹುಡುಕಿಸಿಕೊಡಬೇಕೆಂದು ಪತ್ರದಲ್ಲಿ ಶಿವಣ್ಣ ಮನವಿ ಮಾಡಿದ್ದಾರೆ.