ಮೊಬೈಲ್ ಕಳ್ಳತನ ಮಾಡುತ್ತಿರುವ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ
1 min readಮೈಸೂರು: ಕಳ್ಳನೊರ್ವ ಬೈಕ್ ನಲ್ಲಿ ಬಂದು ವ್ಯಕ್ತಿಯೊಬ್ಬರ ಕೈಯಲ್ಲಿರೊ ಮೊಬೈಲ್ ಕಿತ್ತು ಮಿಂಚಿನ ವೇಗದಲ್ಲಿ ಪರಾರಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೊಬೈಲ್ ಕಳ್ಳತನ ಮಾಡುತ್ತಿರುವ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಖದೀಮನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ ಯಾಗಿದ್ದು, ಮೈಸೂರಿನ ಸಿದ್ದಾರ್ಥ ನಗರ ಮಧು ಫಾಸ್ಟ್ ಪುಡ್ ಬಳಿ ಘಟನೆ ನಡೆದಿದೆ. ಮೊನ್ನೆ ಸಂಜೆ ಕಳ್ಳ ಮೊಬೈಲ್ ಕಿತ್ತೊಯ್ದಿದ್ದಾನೆ. ನಂ ಪ್ಲೇಟ್ ಇಲ್ಲದ ಮೊಪೆಡ್ ನಲ್ಲಿ ಬಂದು ಕಳ್ಳತನ ಮಾಡಿದ್ದಾ ನೆ. ಕಳೆದ ಒಂದು ವಾರದ ಅಂತರದಲ್ಲಿ 9 ಮೊಬೈಲ್ ಕಳ್ಳತನವಾಗಿರುವ ಬಗ್ಗೆ ಸ್ಥಳೀಯರ ಮಾಹಿತಿ ನೀಡಿದ್ದಾರೆ. ಪ್ರತಿ ಕಳ್ಳತನ ಮಾಡುವಾಗಲೂ ನಂ ಪ್ಲೇಟ್ ಇಲ್ಲದ ವಾಹನ ಬಳಕೆ ಮಾಡಲಾಗಿದೆ. ನಜರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.