ಮಲೆ ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ಪಲ್ಲಕ್ಕಿ ಉತ್ಸವ, ಮುಡಿ ಸೇವೆ, ದಾಸೋಹ ಸ್ಥಗಿತ!
1 min readರಾಜ್ಯದಲ್ಲಿ ಕೊರೋನಾ ಕಂಟ್ರೋಲ್ಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಿದ್ದು ಮೂರನೇ ಅಲೆ ತಡೆಯೋಕೆ ಸಿದ್ದತೆ ಮಾಡಿಕೊಳ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದು, ಸೂಕ್ತ ಕ್ರಮ ಹಾಗೂ ಗಡಿ ಜಿಲ್ಲೆಯ ಅಲರ್ಟ್ ಆಗಿರುವಂತೆ ಸೂಚಿಸಿದ್ದಾರೆ.
ಅದರಂತೆ ಇಂದಿನಿಂದಲೇ ಚಾಮರಾಜನಗರದಲ್ಲಿ ಹೈ ಅಲರ್ಟ್ ಜಾರಿ ಮಾಡುತ್ತಿದ್ದು ಅದರಲ್ಲು ಗಡಿ ಭಾಗಕ್ಕೆ ಎಂಟ್ರಿ ಆಗಲು ಆರ್ಟಿಪಿಸಿಆರ್ ವರದಿ ಕಡ್ಡಾಯವಾಗಿದ್ದು ಎರಡು ಡೋಸ್ ವಾಕ್ಸಿನ್ ಆಗಿರೋದು ಕಡ್ಡಾಯವಾಗಿದೆ.
ಇದರ ಬೆನ್ನಲ್ಲೇ ಧಾರ್ಮಿಕ ಕ್ಷೇತ್ರವಾದ ಪುರಾಣ ಪ್ರಸಿದ್ಧ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿಗಾ ಮುಡಿ ಸೇವೆ, ಪಲ್ಲಕ್ಕಿ ಉತ್ಸವ, ದಾಸೋಹ ವ್ಯವಸ್ಥೆ ಮುಂದಿನ ಆದೇಶದವರೆಗು ಅಂದ್ರೆ ಆಗಸ್ಟ್ 15ರ ವರೆಗು ನಿರ್ಬಂಧಿಸಲಾಗಿದೆ. ಮಾತ್ರವಲ್ಲ ದೇಗುಲದಲ್ಲಿ ಉಳಿದುಕೊಳ್ಳುವ ರೂಂ ವ್ಯವಸ್ಥೆಗು ಬ್ರೇಕ್ ಹಾಕಲಾಗಿದೆ.
ಸಿಎಂ ವಿಡಿಯೋ ಕಾನ್ಫರೆನ್ಸ್ ಮುಗಿಯುತ್ತಿದ್ದಂತೆ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಈ ನಿರ್ಧಾರ ಕೈಗೊಂಡಿದ್ದು ಕಳೆದ ಬಾರಿಯಂತೆ ಈ ಬಾರಿ ಸಮಸ್ಯೆ ಆಗದಂತೆ ಕ್ರಮ ವಹಿಸಿದ್ದಾರೆ. ಮಾತ್ರವಲ್ಲದೆ ಜಿಲ್ಲೆಯಲ್ಲಿ ಯಾವುದೇ ಹೋಟೆಲ್ ಹೋಮ್ ಸ್ಟೇ, ರೆಸಾರ್ಟ್ ನಲ್ಲಿ ಆರ್ಟಿಪಿಸಿಆರ್ ವರದಿ ಇಲ್ಲದೆ ರೂಂ ನೀಡುವಂತಿಲ್ಲ ಎಂದು ಆದೇಶ ಸಹ ಮಾಡಿದ್ದಾರೆ.