ಧರ್ಮಸ್ಥಳದಲ್ಲಿ ವಿಕೆಂಡ್ ದರ್ಶನಕ್ಕೆ ಬ್ರೇಕ್!
1 min readಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರಕ್ಕೆ ನಿತ್ಯವೂ ಸಾವಿರಾರು ಸಂಖ್ಯೆಯ ಭಕ್ತರು ತೆರಳಿ ಮಂಜುನಾಥ ಸ್ವಾಮಿಯ ದರುಶನ ಪಡೆಯುತ್ತಾರೆ. ಆದ್ರೀಗಾ ಕೋವಿಡ್ ದಿನೆ ದಿನೆ ಹೆಚ್ವಾಗುತ್ತಿರುವ ಕಾರಣ ಕಠಿಣ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ.
-ಏತನ್ ಮಧ್ಯೆ ಇಂದಿನಿಂದ 10 ದಿನಗಳ ಕಾಲ ಅಂದರೆ ಆಗಸ್ಟ್ 5 ರಿಂದ ಆಗಸ್ಟ್ 15ರ ವರೆಗು ಮಂಜುನಾಥ ಸ್ವಾಮಿಯ ದೇಗುಲದಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು ಸೇವೆ, ಪ್ರಸಾದ, ಅನ್ನಸಂತರ್ಪಣೆ, ವಸತಿ ವ್ಯವಸ್ಥೆಯನ್ನ ರದ್ದುಗೊಳಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.
ಅಲ್ಲದೆ ಶನಿವಾರ ಹಾಗೂ ಭಾನುವಾರ ಎರಡು ದಿನವು ದೇವರ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಈ ಮೂಲಕ ಕರೋನಾ ನಿಯಂತ್ರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಜ್ಜಾಗಿದೆ.