ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಶಾಸಕರ ಪಾದಯಾತ್ರೆ

1 min read

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಎಸ್ ಶ್ರೀವತ್ಸ ಅವರು ವಾರ್ಡ್ ನಂಬರ್ 49 ವ್ಯಾಪ್ತಿಯ ಗುರಿಕಾರ್ ದೇವಯ್ಯ ರಸ್ತೆ, ಬಸವೇಶ್ವರ ರಸ್ತೆ,ಕುದೇರ್ ಮಠದ ರಸ್ತೆ, ಅಗ್ರಹಾರ, ನೂರೊಂದು ಗಣಪತಿ ದೇವಸ್ಥಾನ ದಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾದಯಾತ್ರೆ ಮಾಡುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಪರಿಹಾರ ನೀಡಿದ್ದಾರೆ.

ಬಸವೇಶ್ವರ ರಸ್ತೆಯಯ ಭಾಗದ ಎರಡನೇ ಕ್ರಾಸ್’ಗೆ 35 ಲಕ್ಷ, ಹಾಗೂ ಚಾವಡಿ ಬೀದಿ ಅಡ್ಡ ರಸ್ತೆ ಗೆ 25 ಲಕ್ಷ ಅನುದಾನ ಪಡೆಯಲಾಗಿದೆ. ಅಗ್ರಹಾರದ ಸುತ್ತ ಮುತ್ತ ಕೆಲವು ಪುಂಡ ಯುವಕರು ಸ್ಕೂಟರ್ ಗಳ ವಿಲಿಂಗ್ ಹಾಗು ಅತಿ ವೇಗವಾಗಿ ಚಾಲನೆ ಮಾಡಿ ಸಾರ್ವಜನಿಕರಿಗೆ ಕಿರಿ ಉಂಟು ಮಾಡುತ್ತಿದ್ದರು ಕೊಡಲೆ ಅಂತಹ ಯುವಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳ ಬೇಕೆಂದು ಪೋಲಿಸ್ ನವರಿಗೆ ಸೂಚಿಸಿದರು.

ಬಸವೇಶ್ವರ ಒಂದನೇ ಕ್ರಾಸ್ ನಲ್ಲಿ ಕಲುಷಿತ ನೀರು ಬರುತ್ತಿದ್ದು ಕಂಡು ಬಂದಿದು ಕೂಡಲೆ ಇಂತಹ ಘಟನೆ ಮರುಕಳಿಸದಂತೆ ಸೂಚಿಸಿದರು. ಒಳಚರಂಡಿ ವ್ಯವಸ್ಥೆಗೆ 20 ಲಕ್ಷಗಳನ್ನು ಚಾವಡಿ ಬೀದಿಯ ಬಾಗಕ್ಕೆ ಮಂಜೂರು ಮಾಡಿರುವದಕ್ಕೆ ಕ್ರಮ ಕೈಗೊಂಡರು.

ಈ ಸಂಧರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್, ಅರುಣ್, ಗುರುದತ್, ಶಂಕರ್ ಸಿಂಗ್, ದೀನ ಮಣಿ, ಅನ್ನಪೂರ್ಣ, ಕಿಶೋರ್, ಉಷಾ, ಶಂಕರ್, ಉಮೇಶ್, ಅಂಜು, ಅಭಿ, ರವಿ ನಾಯಕ್, ರವಿ ಕುಮಾರ್, ನಿತೀಶ್ ಕುಮಾರ್, ಮಹದೇವ ನಾಯಕ್, ಕೀರ್ತಿ, ಸೋಮ, ಲೋಕೇಶ್ ಸೇರಿದಂತೆ ಮುಂತಾದವರು ಇದ್ದರು.

About Author

Leave a Reply

Your email address will not be published. Required fields are marked *