ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ ಸ್ಥಳಾಂತರ
1 min read
ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ – 1 ಇದುವರೆಗೂ ತ್ಯಾಗರಾಜ ರಸ್ತೆ 5 ನೇ ಕ್ರಾಸ್ ನಲ್ಲಿರುವ ಅಕ್ಕನಬಳಗ ಶಾಲೆಯ ಎದುರಿನ ಉದ್ಯಾನವನದಲ್ಲಿ ಕಾರ್ಯನಿರ್ವಹಿಸುತ್ತಿತ್ತು, ದಿನಾಂಕ 7-8-2023 ರಿಂದ ಜೆ ಎಸ್ ಎಸ್ ಆಸ್ಪತ್ರೆ ಬಳಿ ಇರುವ ಉತ್ತರಾದಿ ಮಠದ ರಸ್ತೆ 5 ನೇ ಕ್ರಾಸ್ ನಲ್ಲಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯಾರಂಭಿಸಿದೆ. ವಾರ್ಡ್ ನಂ. 49, 50, 51, 52, 54, 55, 61ನೇ ವಾರ್ಡಿನ ಸಾರ್ವಜನಿಕರು ಇನ್ನೂ ಮುಂದೆ ಮೇಲ್ಕಂಡ ವಿಳಾಸದ ನೂತನ ಕಚೇರಿಯಲ್ಲಿ ವ್ಯವಹರಿಸಬೇಕಾಗಿ ಪಾಲಿಕೆ ಸದಸ್ಯ ಬಿ ವಿ ಮಂಜುನಾಥ್ ತಿಳಿಸಿದ್ದಾರೆ.
ಈ ನೂತನ ಕಟ್ಟಡದಲ್ಲಿ ವಲಯ ಮಟ್ಟದ ಇಂಜಿನಿಯರಿಂಗ್ ವಿಭಾಗ, ಕಂದಾಯ ವಿಭಾಗ, ಪರಿಸರ ಮತ್ತು ಆರೋಗ್ಯ ವಿಭಾಗ, ಜನನ ಮತ್ತು ಮರಣ ನೋಂದಣಿ ವಿಭಾಗ, ಕಂದಾಯ ಮತ್ತು ನೀರಿನ ಬಿಲ್ ಪಾವತಿ ಕೇಂದ್ರಗಳು ಕಾರ್ಯ ನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಬಿಲ್ ಪಾವತಿ ಕೇಂದ್ರವನ್ನು ಸಹ ಇಲ್ಲಿ ತರುವ ಪ್ರಯತ್ನ ನಡೆಯುತ್ತಿದೆ ಎಂದು ಬಿ ವಿ ಮಂಜುನಾಥ್ ತಿಳಿಸಿದರು.

ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಲಯ ಕಛೇರಿ – 1 ರ ಜಾಗದಲ್ಲಿ 40 ಲಕ್ಷ ವೆಚ್ಚದಲ್ಲಿ ಉದ್ಯಾನವನವನ್ನು ಅಭಿವೃದ್ಧಿ ಪಡಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆದಾರನಿಗೆ ಕಾರ್ಯದೇಶ ಪತ್ರ ನೀಡಲಾಗಿದೆ. ಸದ್ಯದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಅಲ್ಲಿನ ಪಾಲಿಕೆ ಸದಸ್ಯ ಬಿ ವಿ ಮಂಜುನಾಥ್ ತಿಳಿಸಿದ್ದಾರೆ.