ಮೈಸೂರಿನ ಇಂದಿರಾ ಕ್ಯಾಂಟಿನ್ನಲ್ಲಿ ಕಳ್ಳಾಟ: ಕೊಳೆತ ತರಕಾರಿಯಿಂದ ಮಾಡ್ತಿದ್ದಾರೆ ಸಾಂಬಾರ್!
1 min readಮೈಸೂರು: ಮೈಸೂರಿನ ಇಂದಿರಾ ಕ್ಯಾಂಟಿನ್ನಲ್ಲಿ ಕಳ್ಳಾಟ ನಡೆದಿದ್ದು ಕೊಳೆತ ತರಕಾರಿಯಿಂದ ಸಾಂಬಾರ್ ಮಾಡುತ್ತಿರುವುದು ಕಂಡುಬಂದಿದೆ.
ಕೆ.ಆರ್ ಕ್ಷೇತ್ರದ ಶಾಸಕ ರಾಮದಾಸ್ ಅವರು ಇಂದಿರಾ ಕ್ಯಾಂಟೀನ್ ವಸ್ತು ಸ್ಥಿತಿ ಅನಾವರಣ ಮಾಡಿದ್ದಾರೆ. ರಾಮದಾಸ್ ಅವರು ಇಂದಿರಾ ಕ್ಯಾಂಟಿನ್ಗೆ ದಿಢೀರ್ ಭೇಟಿ ಕೊಟ್ಟಿದ್ದು, ಈ ವೇಳೆ ಕೊಳೆತ ಕುಂಬಳಕಾಯಿ, ಟಮೋಟ ಕಂಡು ಆಕ್ರೋಶ ಹೊರಹಾಕಿದ್ದಾರೆ.
ಸಾರು ಹೆಸರಿಗಷ್ಟೆ ಮಾತ್ರ ಮಾಡಿದ್ದಾರೆ’ ತಿನ್ನಲು ಆಗೋದಿಲ್ಲ ಅಂತ ಊಟ ಮಾಡುತ್ತಲ್ಲೇ ಇಂದಿರಾ ಕ್ಯಾಂಟೀನ್ ಆಹಾರದ ಬಗ್ಗೆ ಬೇಸರ ಹೊರಹಾಕಿದ್ದಾರೆ ರಾಮದಾಸ್. ಇಂದಿರಾ ಕ್ಯಾಂಟೀನ್ ಲೆಕ್ಕವು ಕೂಡ ರಾಮನ ಲೆಕ್ಕ ಕೃಷ್ಣನ ಲೆಕ್ಕ. ಒಂದು ಕಡೆ 550 ಮಂದಿ ಲೆಕ್ಕ ತೋರಿಸಿ- 100ಮಂದಿಗೆ ಊಟ ಕೊಡ್ತಿಲ್ಲ. ಈ ಬಗ್ಗೆ ತನಿಖೆಗೆ ಆಗ್ರಹಿಸುತ್ತೇನೆ. ಪಾಲಿಕೆ ಆಯುಕ್ತರಿಗೆ ಈ ಬಗ್ಗೆ ತನಿಖೆ ಮಾಡುವಂತೆ ಪತ್ರ ಬರೆಯುತ್ತೇನೆ.