ಚಾಮುಂಡಿಬೆಟ್ಟದ ಕೋತಿ, ನಾಯಿ, ದನಗಳಿಗೆ ಆಹಾರ ನೀಡಿದ ಶಾಸಕ ರಾಮದಾಸ್

1 min read

ಮೈಸೂರು: ಇಂದು ಬೆಳಗ್ಗೆ ಶಾಸಕ ಎಸ್ ಎ ರಾಮದಾಸ್ ಅವರು ಚಾಮುಂಡಿ ಬೆಟ್ಟದ ಪಾದದ ಬಳಿಯಲ್ಲಿ ಕೋತಿ, ನಾಯಿ ಹಾಗೂ ದನಗಳಿಗೆ ಆಹಾರವನ್ನ ನೀಡಿದರು. ನಂತರದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಸಂಯುಕ್ತ ಆಶ್ರಯದಲ್ಲಿ ಚಾಮುಂಡಿಬೆಟ್ಟದ ಕೆಳಭಾಗ ಮತ್ತು ಮೇಲ್ಬಾಗದಲ್ಲಿರುವ ಮಂಗಗಳಿಗೆ ಮತ್ತು ದನಕರುಗಳು ಪಕ್ಷಿಗಳಿಗೆ ಆಹಾರ ಪದಾರ್ಥಗಳನ್ನು ನೀಡುವ ಕಾರ್ಯಕ್ರಮವು ಹಲವಾರು ದಿನಗಳಿಂದ ನಡೆಯುತ್ತಿದ್ದು ಇಂದು ಅವರೊಂದಿಗೆ ಮಾನ ಶಾಸಕರೂ ಜೊತೆಗೂಡಿ ಆಹಾರಪದಾರ್ಥಗಳನ್ನ ನೀಡಿದರು.

ಕೆಲವು ಕೋತಿಗಳಿಗೆ ಆರೋಗ್ಯ ಸಮಸ್ಯೆ ಇರುವುದನ್ನ ಕಂಡು ಮಾನ್ಯ ಶಾಸಕರು ಕೂಡಲೇ ಪಶು ವೈದ್ಯಾಧಿಕಾರಿಗಳಿಗೆ ತಿಳಿಸಿ ಔಷಧೋಪಚಾರ ಮಾಡಲು ಹೇಳಿದರು. ಸದರಿ ಕಾರ್ಯಕ್ರಮದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಮ್ಯಾನೇಜರ್ ವೇಣು ಹಾಗೂ ಸೂರ್ಯಕೀರ್ತಿ ಇತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *