ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ರಾಮದಾಸ್ ಅಸಮಾಧಾನ!

1 min read

ಬಿಜೆಪಿಗೆ ರಾಜೀನಾಮೆ ನೀಡ್ತಾರಾ ಶಾಸಕ ಎಸ್.ಎ.ರಾಮದಾಸ್ ಹಿಗೋಂದು ರಾಜೀನಾಮೆ ನೀಡ್ತಾರೆಂಬ ಚರ್ಚೆ ಸದ್ಯ ಮೈಸೂರು ಬಿಜೆಪಿ ವಲಯದಲ್ಲ ಚರ್ಚೆ ಆರಂಭವಾಗಿದೆ. ಪಕ್ಷದಲ್ಲಿ ನಿಷ್ಠಾವಂತರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಈ ಚರ್ಚೆ ಆರಂಭವಾಗಿದೆ. ಹೌದು, ಮೈಸೂರು ಬಿಜೆಪಿಯಲ್ಲಿಗಾ ಅಸಮಾಧಾನ ಸ್ಪೋಟವಾಗಿದೆ. ಸಚಿವ ಸ್ಥಾನ ಸಿಗದ ಕಾರಣ ಶಾಸಕ ರಾಮದಶ್ ಮುನಿಸಿಕೊಂಡಿದ್ದು ತಮ್ಮ ಆಪ್ತರ ಬಳಿ ಬೇಸರ ಹೊರಹಾಕಿದ್ದಾರೆ.

ಇಂದು ಮೈಸೂರಿಗೆ ಸಿಎಂ ಬೊಮ್ಮಾಯಿ ಸೇರಿ ಸಚಿವ ಸಂಪುಟದ ಹಲವು ಸಚಿವರ ಆಗಮಿಸುತ್ತಿದ್ದಾರೆ. ಆದರೆ ಸಿಎಂ‌ ಕಾರ್ಯಕ್ರಮಕ್ಕೆ ಶಾಸಕ ರಾಮದಾಸ್ ಗೈರು ಆಗೋದು ಬಹುತೇಕ‌ ಪಕ್ಕಾ ಆಗಿದ್ದು, ಸಚಿವ ಸ್ಥಾನ ಸಿಗದ ಕಾರಣ ಶಾಸಕ ರಾಮದಾಸ್ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಪಟ್ಟಿಯಲ್ಲಿ ಹೆಸರಿದ್ದರು ರಾಮದಾಸ್‌ಗೆ ಸಚಿವ ಸ್ಥಾನ ಮಿಸ್!

ರಾಜ್ಯದ ಪಟ್ಟಿಯಲ್ಲಿ ಶಾಸಕ ರಾಮದಾಸ್ ಹೆಸರಿದ್ದರು ಸಹ ಸಚಿವ ಸ್ಥಾನ ಮಿಸ್ ಆಗಿದೆ. ಇದರಿಂದ ಸಾಕಷ್ಟು ಬೇಸರ ಹೊರಹಾಕಿರೋ ರಾಮದಾಸ್, ಕಳೆದ 25 ವರ್ಷದಿಂದ ಪಕ್ಷ ಸಂಘಟನೆಯಲ್ಲಿದ್ದೇನೆ. ಆದರು ನನಗೆ ಸಚಿವ ಸ್ಥಾನ ನೀಡಿಲ್ಲ ಎಂದು ಆಪ್ತರ ಬಳಿ ಬೇಸರ ಹೊಹಾಕಿದ್ದಾರೆ. ಇಂದು ಪೇಜ್ ಪ್ರಮುಖ ಕಾರ್ಯಕ್ರಮ ಹಮ್ಮಿಕೊಂಡಿರೋ ರಾಮದಾಸ್, ಇದೇ ಕಾರ್ಯಕ್ರಮದ ನೆಪವೊಡ್ಡಿ ಸಿಎಂ‌ ಕಾರ್ಯಕ್ರಮಕ್ಕೆ ಗೈರಾಗುವ ಸಾಧ್ಯತೆ ಇದೆ.

ಇನ್ನು ಸಚಿವರನ್ನ ನೋಡೋದಾದ್ರೆ ಹಳೆ ಮೈಸೂರು ಭಾಗಕ್ಕೆ ಒಂದೇ ಒಂದು ಸಚಿವ ಸ್ಥಾನವು ಸಿಕ್ಕಿಲ್ಲ. ಇದರಿಂದ ಬಿಜೆಪಿ ಕಾರ್ಯಕರ್ತರು ಮುಖಂಡರು ಕೂಡ ಬೇಸರ ಹೊರಹಾಕಿದ್ದು, ಬಿಜೆಪಿ ನಿಮಗೆ ಮೋಸ ಮಾಡಿದೆ ಎಂದು ಕಾರ್ಯಕರ್ತರ ಆಕ್ರೋಶ ಅಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಆದರೆ ಯಾವುದಕ್ಕು ಉತ್ತರ ನೀಡದೆ ಶಾಸಕ ರಾಮದಾಸ್ ಮೌನ ವಹಿಸಿದ್ದಾರೆ.

About Author

Leave a Reply

Your email address will not be published. Required fields are marked *