ನಾನು ಬದುಕಿದ್ದಾನಾ…? ಕೆ.ಆರ್. ನಗರದ ಶಾಸಕ ಬದುಕಿದ್ದಾರಾ…? ಸಚಿವ ಎಸ್.ಟಿ. ಸೋಮಶೇಖರ್
1 min readಮೈಸೂರು: ಜಿಲ್ಲಾ ಉಸ್ತುವಾರಿ ಸಚಿವರ ಬದುಕಿದ್ದಾರಾ ಎಂಬ ಮಾಜಿ ಸಚಿವ ಸಾರಾ ಮಹೇಶ್ ಹೇಳಿಕೆಗೆ ಮೈಸೂರಿನಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ತಿರುಗೇಟು ನೀಡಿದ್ದಾರೆ.
ನಾನು ಬದುಕಿದ್ದಾನಾ…? ಕೆ.ಆರ್. ನಗರದ ಶಾಸಕರು ಬದುಕಿದ್ದಾರಾ…? ಇದನ್ನ ಜನರ ತೀರ್ಮಾನ ಮಾಡಿ ಹೇಳಲಿ. ಮೈಸೂರಿನ 11 ವಿಧಾನಸಭಾ ಕ್ಷೇತ್ರದಲ್ಲಿ ಕರೋನಾ ಕುರಿತು ಸಭೆ ಮಾಡಿದ್ದೇನೆ. ಎಲ್ಲಾ ಕ್ಷೇತ್ರದಲ್ಲೂ ಆಯಾ ಶಾಸಕರು ಸಭೆಗೆ ಬಂದು ಚರ್ಚೆ ಮಾಡಿದ್ದಾರೆ. ಆದರೆ, ಕೆ.ಆರ್.ನಗರದ ಕ್ಷೇತ್ರದ ಶಾಸಕರು ಸಭೆಗೆ ಬರಲಿಲ್ಲ. ಕ್ಷೇತ್ರದ ಜನರ ಬಗ್ಗೆ ಕಾಳಜಿ ಇದ್ದರೆ ಅವರು ಸಭೆಗೆ ಬರಬೇಕಿತ್ತು ಎಂದು ಕಿಡಿ ಕಾರಿದರು.
ನಾನು ಈ ಜಿಲ್ಲೆಯ ಜನರಿಗಾಗಿ ಪ್ರಾಣ ಕೊಡುವುದಕ್ಕೂ ಸಿದ್ಧನಿದ್ದೇನೆ. ಹಗಲಿರುಳು ಈ ಜಿಲ್ಲೆಯ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ಇದನ್ನು ಜಿಲ್ಲೆಯ ಜನ ಗಮನಿಸಿದ್ದಾರೆ. ಈಗ ಜನರೇ ತೀರ್ಮಾನ ಮಾಡಲಿ ಯಾರು ಬದುಕಿದ್ದಾರೆ ಅಂತಾ..? ನನಗೂ ದಿನಕ್ಕೂ ವೆಂಟಿಲೇಟರ್, ಬೆಡ್ ಗಾಗಿ ಹತ್ತಾರು ಕರೆ ಬರುತ್ತವೆ. ನಾನು ಯಾರಿಗೂ ಇನ್ಪ್ಲೂಯೆಂಸ್ ಮಾಡಿಲ್ಲ. ಯಾಕೆಂದರೆ ನನ್ನ ಇನ್ಪ್ಲೂಯೆಂಸ್ ನಿಂದ ಇನ್ನೊಬ್ಬ ರೋಗಿಗೆ ತೊಂದರೆ ಆಗುತ್ತದೆ ಅಂತಾ. ಇದು ನನ್ನ ಬದ್ಧತೆ ಇದು ನನ್ನ ಕಾರ್ಯವೈಖರಿ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದರು.