15 ದಿನದಿಂದ ಸಂಸದ ಪ್ರತಾಪಸಿಂಹ ಕಾಣೆಯಾಗಿದ್ದಾರೆ: ಎಂ ಲಕ್ಷ್ಮಣ್
1 min readಮೈಸೂರು: 15 ದಿನದಿಂದ ಸಂಸದ ಪ್ರತಾಪಸಿಂಹ ಕಾಣೆಯಾಗಿದ್ದಾರೆ ಆಂತ ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ.
ಪ್ರತಾಪಸಿಂಹ ಅವರೆ ಐಎಎಸ್ ಅಧಿಕಾರಿಗಳನ್ನು ಓಡಿಸುವವರೆಗೂ ಆ್ಯಕ್ಟೀವ್ ಆಗಿದ್ದಿರಿ. ಈಗ ನಿಮ್ಮ ಫೇಸ್ ಬುಕ್ ಬಂದ್ ಮಾಡಿದ್ದೀರಿ. ಕಾಮೆಂಟ್ ಬಾಕ್ಸ್ ಬಂದ್ ಮಾಡಿದ್ದೀರಿ. ದಯಮಾಡಿ ಸಂಸದರೇ ಮುಂದೆ ಬನ್ನಿ. ಜನ ಸಾಯುತ್ತಿದ್ದಾರೆ ಸಾವಿನ ಸಂಖ್ಯೆ ಮುಚ್ಚಿಡಲಾಗುತ್ತಿದೆ. ಜಿಲ್ಲಾಧಿಕಾರಿಗಳೇ ನೀವು ಸಿಕ್ಕಿ ಹಾಕಿಕೊಳ್ಳಬೇಡಿ. ಸಾವಿನ ಸರಿಯಾದ ಅಂಕಿ ಅಂಶ ಕೊಡಿ ಎಂದರು.
ಈಗ ಸರ್ಕಾರ ಒಂದು ಲಕ್ಷ ಪರಿಹಾರ ನೀಡುತ್ತಿದೆ. ಇಲ್ಲಿಯವರೆಗೆ 33 ಸಾವಿರ ಸಾವಿನ ಸಂಖ್ಯೆ. ಇದರಲ್ಲಿ 1900 ಜನ ಮಾತ್ರ ಬಿಪಿಎಲ್ ಬಳಕೆದಾರರು. ಒಂದು ಲಕ್ಷ ನೀಡಿ ಕಣ್ಣೋರೆಸುವ ತಂತ್ರ. ಸರ್ಕಾರದ ಪ್ಯಾಕೇಜ್ಗಳೆಲ್ಲಾ ಡುಬಾಕ್ ಆಗಿದೆ. ಸಚಿವ ಎಸ್ ಟಿ ಸೋಮಶೇಖರ್ ಪೋಟೋ ಸೆಷನ್ ಮಾತ್ರಾ ಮಾಡ್ತಾರೆ. ರಾಜ್ಯದಿಂದ ಒಂದು ನಯಾಪೈಸೆ ಮೈಸೂರಿಗೆ ತಂದಿಲ್ಲ ಅಂತ ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ವಾಗ್ದಾಳಿ ನಡೆಸಿದ್ದಾರೆ.