ಒಂದೇ ದಿನ ಕೋರ್ಟ್‌ನಲ್ಲಿ 3 ಲಕ್ಷಕ್ಕು ಹೆಚ್ಚು ಪ್ರಕರಣ ಇತ್ಯರ್ಥ- ಮೈಸೂರಿನ ವಿಚ್ಚೇದಿತ ಜೋಡಿ ಮರುಮದುವೆ!
1 min readರಾಜ್ಇ
ರಾಜ್ಯ – ಮೈಸೂರು : ಇಡೀ ರಾಷ್ಟ್ರದಲ್ಲಿ ಎಲ್ಲು ಆಗದ ಕೆಲಸ ಇದೀಗಾ ರಾಜ್ಯದಲ್ಲಿ ಆಗಿದ್ದು ಕೇವಲ ಒಂದೇ ದಿನದಲ್ಲಿ ಬರೋಬ್ಬರಿ 3 ಲಕ್ಷದ 88 ಲಕ್ಷದಷ್ಟು ಪ್ರಕರಣಗಳನ್ನ ಇತ್ಯರ್ಥಪಡಿಸಿ ಹೊಸ ದಾಖಲೆ ನಿರ್ಮಾಣ ಮಾಡಲಾಗಿದೆ. ಹೌದು ಆ.14ರಂದು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಲೋಕಾ ಅದಲಾತ್ ಮಾಡಲಾಗಿತ್ತು. ರಾಜ್ಯದಲ್ಲಿ ಒಟ್ಟು 943 ಬೆಂಚ್‌ಗಳನ್ನ ಸ್ಥಾಪಿಸಲಾಗಿತ್ತು. ಈ ಬೆಂಚ್‌ಗಳಲ್ಲಿ ( ನ್ಯಾಯಾಲಯ ) ಒಂದೇ ದಿನಕ್ಕೆ 5ಲಕ್ಷಕ್ಕು ಹೆಚ್ಚು ಪ್ರಕರಣ ಕೈಗೆತ್ತುಕೊಂಡು ಇದರಲ್ಲಿ ಬರೋಬ್ಬರಿ 3.88 ಲಕ್ಷ ವ್ಯಾಜ್ಯಗಳನ್ನ ಪರಿಹಾರ ಮಾಡಿ ಹೊಸ ದಾಖಲೆ ಬರೆಯಲಾಗಿದೆ.
ಹೌದು- ಇಂತಹದೊಂದು ಸಾಹಸಕ್ಕೆ ಕೈ ಹಾಕಿ ದೊಡ್ಡ ಮಟ್ಟದ ಬಾಕಿ ಉಳಿದ ಪ್ರಕರಣವನ್ನ ಇತ್ಯರ್ಥ ಮಾಡಿರುವುದಾಗಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಹೇಳಿದ್ದಾರೆ.
ಇದರಿಂದ ಸರ್ಕಾರಕ್ಕೆ 121 ಕೋಟಿಯಷ್ಟು ಹಣ ವೈಯಕ್ತಿಕವಾಗಿ ಲಾಭವಾಗಿದ್ದು, 25 ಕೋಟಿಯನ್ನ ದಂಡವಾಗಿ ಪಡೆಯಲಾಗಿದೆ. ಇದರಲ್ಲಿ 74 ದಂಪತಿಗಳು ವಿಚ್ಚೇದನದಿಂದ ಮರು ಮದುವೆಯಾಗಿದ್ದು ಮೈಸೂರಿನಲ್ಲು ಜೋಡಿಯೊಂದು ಮರು ವಿವಾಹವಾಗಿ ಪ್ರಕರಣ ಇತ್ಯರ್ಥವಾಗಿದೆ.
ಈ ಲೋಕಾ ಅದಲಾತ್ ರಾಷ್ಟ್ರದಲ್ಲೇ ಇಷ್ಟು ದೊಡ್ಡ ಮಟ್ಟದಲ್ಲಿ ಮಾಡಲಾಗಿದ್ದು ಒಂದೇ ದಿನ 3ಲಕ್ಷಕ್ಕು ಹೆಚ್ಚು ಪ್ರಕರಣ ಇತ್ಯರ್ಥ ಮಾಡುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ.