ಲಾಕ್ಡೌನ್ ನಿಯಮ ಉಲ್ಲಂಘನೆ: ಮೈಸೂರಿನಲ್ಲಿ 300ಕ್ಕೂ ಹೆಚ್ಚು ವಾಹನಗಳು ಸೀಜ್
1 min readಮೈಸೂರು: ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದ ಹಿನ್ನಲೆ ಮೈಸೂರಿನಲ್ಲಿ 300ಕ್ಕೂ ಹೆಚ್ಚು ವಾಹನಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ.
ಲಾಕ್ಡೌನ್ನಲ್ಲಿ ಅನಗತ್ಯವಾಗಿ ಓಡಾಡುತ್ತಿರುವ ವಾಹನ ಸೀಜ್ ಮಾಡಲಾಗಿದ್ದು, ಎನ್.ಆರ್, ಕೆ.ಆರ್ ಮತ್ತು ದೇವರಾಜ ಸಂಚಾರ ಪೊಲೀಸ್ ಠಾಣೆ ಸೇರಿದಂತೆ ಹಲವು ಠಾಣೆಯಲ್ಲಿ ಸೀಜ್ ಆದ ವಾಹನ ಇರಿಸಲಾಗಿದೆ.
ನಿನ್ನೆಯಿಂದ ಅನಗತ್ಯವಾಗಿ ಸಂಚಾರ ನಡೆಸಿದ ಸುಮಾರು 318 ವಾಹನಗಳನ್ನ ಸೀಜ್ ಮಾಡಲಾಗಿದೆ. ಸೂಕ್ತ ಕಾರಣದ ಜೊತೆಗೆ ವಾಹನದ ದಾಖಲೆ ನೀಡಿದರೆ ಮಾತ್ರ ವಾಹನ ವಾಪಸ್. ಇಲ್ಲವಾದಲ್ಲಿ ಲಾಕ್ದೌನ್ ಮುಗಿಯುವವರೆಗೂ ವಾಹನ ಇಲ್ಲ ಎಂದು ಪೊಲೀಸರು ಸ್ಪಷ್ಟವಾಗಿ ತಿಳಿಸಿದ್ದಾರೆ.
ಇನ್ನು ಪೊಲೀಸ್ ಠಾಣೆಗಳ ಮುಂಭಾಗ ವಾಹನಕ್ಕಾಗಿ ಜನರು ಕಾದು ನಿಂತಿದ್ದು, ವಾಹನ ಕೊಡಿ ಸರ್ ಎಂದು ಗೋಗರೆಯುತ್ತಿರುವ ದೃಷ್ಯಗಳ ಕಂಡುಬಂದಿತು.