ವಿದ್ಯುತ್ ಪ್ರವಹಿಸಿ ಜೂನೀಯರ್ ಪವರ್ ಮ್ಯಾನ್ ಸಾವು,

1 min read

ಪಿರಿಯಾಪಟ್ಟಣ: ವಿದ್ಯುತ್ ಟ್ರಾನ್ಸ್ ಪಾರ್ಮರ್ ರೀಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ವಿದ್ಯುತ್ ಪ್ರವಹಿಸಿ ಜೂನೀಯರ್ ಪವರ್ ಮ್ಯಾನ್ ಒಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಅಮೀರ್ ಖಾನ್ (25) ಮೃತಪಟ್ಟ ದುರ್ದೈವಿ. ಈತ ಮೂಲತಃ ದಾವಣಗೆರೆಯನಾಗಿದ್ದು, ಪಿರಿಯಾಪಟ್ಟಣ ತಾಲೂಕಿನ ಕಣಗಾಲು ವಿದ್ಯುತ್ ಉಪ ಕೇಂದ್ರದಲ್ಲಿ ಪವರ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಗುರುವಾರ ಸಂಜೆ 4 ಗಂಟೆಯ ಸಮಯದಲ್ಲಿ ಜೂನೀಯರ್ ಇಂಜಿನೀಯರ್ ಬಳಿ ಅನುಮತಿ ಪಡೆದು ತಾಲ್ಲೂಕಿನ ಸುಬ್ಬಯ್ಯನಕೊಪ್ಪಲು ಗ್ರಾಮದ ಬಳಿ ವಿದ್ಯುತ್ ಪ್ರಾನ್ಸ್ ಪಾರ್ಮರ್ ರಿಪೇರಿ ಮಾಡುತ್ತಿರುವಾಗ ಆಕಸ್ಮಿಕ ವಿದ್ಯುತ್ ಪ್ರವಹಿಸಿ ಟ್ರಾನ್ಸ್ ಪಾರ್ಮರ್ ನಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಸವನ್ನಪ್ಪಿದ್ದಾನೆ

ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಮೃತನ ಶವವನ್ನು ಮರಣೊತ್ತರ ಪರೀಕ್ಷೆ ಕಳುಹಿಸಲಾಗಿದ್ದು ಪ್ರಕರಣ ಕುರಿತು ಪೊಲೀಸರು ತನಿಖಾ ಕಾರ್ಯ ಆರಂಬಿಸಿದ್ದಾರೆ.

About Author

Leave a Reply

Your email address will not be published. Required fields are marked *