ಕುರಿಗಾಹಿ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ಜಮೀನಿನ ಮಾಲೀಕನಿಂದ ದೌರ್ಜನ್ಯ
1 min readಮಂಡ್ಯ: ಸಕ್ಕರೆ ಮನಾಡು ಮಂಡ್ಯ ಜಿಲ್ಲೆಯಲ್ಲೊಂದು ಅವಮಾನಿಯಯ ಘಟನೆ ನಡೆದಿದೆ. ಕುರಿಗಾಹಿ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ಜಮೀನಿನ ಮಾಲೀಕನಿಂದ ದೌರ್ಜನ್ಯ ನಡೆಸಲಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್’ನ ಜಮೀನೊಂದರ ಬಳಿ ಈ ಘಟನೆ ನಡೆದಿದೆ.
ಜಮೀನಿನ ಮಾಲೀಕ ಹರ್ಷ ಎಂಬ ವ್ಯಕ್ತಿಯಿಂದ ಬಾಲಕನ ಮೇಲೆ ದೌರ್ಜನ್ಯ ನಡೆದಿದ್ದು, ತನ್ನ ಜಮೀನಿನಿಗೆ ಕುರಿಗಳನ್ನು ಬಿಟ್ಟ ಕಾರಣಕ್ಕೆ ಬಾಲಕನನನ್ನು ಮರಕ್ಕೆ ಕಟ್ಟಿ ಹಾಕಿದ್ದಾನೆ. ಬಾಲಕ ಕುರಿಮಂದೆಗಳನ್ನು ಮೇಯಿಸುವ ಕಾಯಕ ಮಾಡ್ತಾ ಕುರಿಗಳನ್ನು ಮೇಯಿಸುತ್ತಿದ್ದ. ಬಾಲಕನನ್ನು ಕಟ್ಟಿ ಹಾಕಿರುವುದನ್ನು ಕಂಡು ನೆರವಿಗೆ ಬಂದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಆಗಮಿಸಿ ಬಾಲಕನ ರಕ್ಷಣೆ ಮಾಡಿದ್ದಾರೆ.
KRS ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.