ಕೆ.ಆರ್ ಕ್ಷೇತ್ರದಲ್ಲಿ ಅತೀ ದೊಡ್ಡ ಸಂಪೂರ್ಣ ಕೋವಿಡ್ ಪರೀಕ್ಷೆ, ಲಸಿಕೆ ಅಭಿಯಾನಕ್ಕೆ ಚಾಲನೆ

1 min read

ಮೈಸೂರು: ಇಂದು ಬೆಳಗ್ಗೆ ಮೈಸೂರು ನಗರದ ಜೆ.ಪಿ.ನಗರದಲ್ಲಿ ಇರುವ ಜೆ.ಎಸ್.ಎಸ್ ಪಬ್ಲಿಕ್ ಶಾಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಾಯೋಗದೊಂದಿಗೆ ಏಕಕಾಲದಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಬರುವ 270 ಬೂತ್ ಗಳಲ್ಲಿ ಟೋಟಲ್ ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಷನ್ ರೆಜಿಸ್ಟ್ರೇಷನ್ – ನಿಮ್ಮ ಆರೋಗ್ಯದ ಕಡೆ ನಮ್ಮ ಹೆಜ್ಜೆ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸನ್ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಎಸ್.ಟಿ.ಸೋಮಶೇಖರ್ ರವರು ನೆರವೇರಸಿದರು . ಮುಖ್ಯ ಅತಿಥಿಯಾಗಿ ಸನ್ಮಾನ್ಯ ಕೃಷಿ ಸಚಿವರಾದ ಶ್ರೀ ಬಿ.ಸಿ.ಪಾಟೀಲ್ ರವರು ಹಾಜರಿದ್ದರು.

ಪ್ರಾಸ್ತಾವಿಕ ನುಡಿಯನ್ನು ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ ರಾಮದಾಸ್ ಅವರು ಇಡೀ ದೇಶದಲ್ಲಿಯೇ ಇಂತಹ ಅಭಿಯಾನ ನಡೆದಿಲ್ಲ ಕೆ.ಆರ್ ಕ್ಷೇತ್ರದಲ್ಲಿ ಬರುವ 270 ಬೂತ್ ಗಳಲ್ಲಿ, 100 ಕೇಂದ್ರಗಳಲ್ಲಿ ಈ ಅಭಿಯಾನ ನಡೆಯಲಿದೆ. ಕೆ.ಆರ್ ಕ್ಷೇತ್ರವನ್ನ ಕೊರೊನಾ ಮುಕ್ತ ಮಾಡಬೇಕೆಂದು ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ದೇಶದಲ್ಲಿ ಕೋವಿಡ್ ಪಾಸಿಟಿವಿಟಿ 5 ಕ್ಕಿಂತಾ ಕಡಿಮೆ ಇದ್ದಾಗ ಮೈಸೂರಿನಲ್ಲಿ 15 ಕ್ಕಿಂತಾ ಹೆಚ್ಚಿದೆ ಎಂದಾಗ ಆತಂಕವಾಗಿತ್ತು. ಇದಕ್ಕಾಗಿಯೇ ನಮ್ಮ ಕಚೇರಿಯಲ್ಲಿ ಪಾಲಿಕಾ ಆಯುಕ್ತರು ಹಾಗೂ ಪೊಲೀಸ್ ಅಧಿಕಾರಿಗಳೊಡನೆ ಚರ್ಚಿಸಿ ಈ ರೀತಿಯ ಅಭಿಯಾನ ಮಾಡಬೇಕು ಎಂದು ನಿರ್ಧಾರ ಮಾಡಿದೆವು.

ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನ ಅಂದು ಪ್ರಧಾನಿ ಮೋದಿಯವರ ಆಶಯದಂತೆ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆಯನ್ನು ದೇಶಾದ್ಯಂತ ನೀಡಲಾಗುವುದು ಎಂದು ತಿಳಿಸಿದ್ದಾರೆ, 16 ಮತ್ತು 17 ನೆ ತಾರೀಖಿನಂದು ಬಂದು ಕೋವಿಡ್ ಟೆಸ್ಟ್ ಮಾಡಿಸಿಕೊಂಡವರು ಅಂದೇ ಲಸಿಕೆಗೆ ರಿಜಿಸ್ಟರ್ ಮಾಡಿರುತ್ತಾರೆ 21 ನೆ ತಾರೀಖಿನಿಂದ ಅದದೇ ಬೂತ್ ಗಳಲ್ಲಿ ಅವರುಗಳಿಗೆ ಲಸಿಕೆ ನೀಡಲಾಗುತ್ತದೆ. ಇಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿ ರಿಸಲ್ಟ್ ಬೇಗ ಕೊಡುವುದಕ್ಕೋಸ್ಕರ ನಾವು ಬೇರೆ ಜಿಲ್ಲೆಗಳಿಗೆ ಕೋವಿಡ್ ಸ್ವ್ಯಾಬ್ ಗಳನ್ನು ಕಳಿಸಲಿದ್ದೇವೆ. ಜುಲೈ 01 ವೈದ್ಯರ ದಿನದ ಮೊದಲು ಮೈಸೂರನ್ನ ಕೋವಿಡ್ ಮುಕ್ತ ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆ, ಈ ಸಮಯದಲ್ಲಿ ನಾನು ನಗರಪಾಲಿಕಾ ಅಧಿಕಾರಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ಶಿಕ್ಷಕರಿಗೆ, ಪಕ್ಷದ ಕಾರ್ಯಕರ್ತರಿಗೆ ಆಭಾರಿಯಾಗಿದ್ದೇನೆ. ಕೊನೆಯ ವ್ಯಕ್ತಿ ಟೆಸ್ಟಿಂಗ್ ಮುಗಿಯುವವರೆಗೂ ಸಹ ಅಭಿಯಾನ ನಡೆಯುತ್ತದೆ ಎಂದರು.

ನಂತರ ಮಾತನಾಡಿದ ಮಾನ್ಯ ರಾಜ್ಯ ಸಹಕಾರಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಸ್.ಟಿ ಸೋಮಶೇಖರ್ ಅವರು ನಾನು ಮೈಸೂರಿಗೆ ಬಂದಾಗಿನಿಂದಲೂ ಸಹ ನೋಡುತ್ತಿದ್ದೇನೆ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ರಾಮದಾಸ್ ಅವರು ಮಾಡುತ್ತಿದ್ದಾರೆ,ಅವರು ಏನೇ ಕೆಲಸ ಮಾಡಿದರೂ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಮಾಡುತ್ತಾರೆ.‌

ಜಿಲ್ಲಾಡಳಿತ ಕೂಡಾ ಕೋವಿಡ್ 19 ನ್ನು ನಿಯಂತ್ರಣ ಮಾಡುವ ಕೆಲಸಗಳಿಗೆ ಚಾಲನೆ ನೀಡಿದೆ. ಒಂದು ಪೈಲಟ್ ಪ್ರಾಜೆಕ್ಟ್ ಆಗಿ ಮಾನ್ಯ ರಾಮದಾಸ್ ಅವರು ಈ ಅಭಿಯಾನವನ್ನು ಕೈಗೊಂಡಿದ್ದಾರೆ,ಕೊರೊನಾ ಮುಕ್ತ ಮೈಸೂರು ಮಾಡುವತ್ತ ರಾಮದಾಸ್ ಅವರ ಕಾರ್ಯ ಶ್ಲಾಘನೀಯ ಸರ್ಕಾರದ ಸಚಿವನಾಗಿ, ಉಸ್ತುವಾರಿ ಸಚಿವನಾಗಿ ರಾಮದಾಸ್ ಅವರಿಗೆ ಅಭಿನಂದನೆಯನ್ನ ಸಲ್ಲಿಸುತ್ತೇನೆ ಎಂದರು.

ಜಿಲ್ಲಾಧಿಕಾರಿಗಳಾದ ಡಾ. ಬಗಾದಿ ಗೌತಮ್ ಅವರು ಮಾತನಾಡಿ ಮೈಸೂರು ಜಿಲ್ಲೆ ರಾಜ್ಯದಲ್ಲಿ ಆನ್ ಲಾಕ್ ಆಗದಂತಹ 11 ಜಿಲ್ಲೆಗಳ ಪಟ್ಟಿಯ್ಲಲಿದೆ ಈ ಹಿನ್ನೆಲೆಯಲ್ಲಿ ಜಿಲ್ಲಾ ಸಚಿವರು ಹೆಚ್ಚಿನ RTPCR ಟೆಸ್ಟ್ ನಡೆಸಬೇಕು ಎಂದು ಸೂಚಿಸಿದ್ದರು, ಅದೇ ರೀತಿ ಕ್ರಮವನ್ನು ನಾವು ಕೈಗೊಂಡಿದ್ದೇವೆ. ಮಾನ್ಯ ಶಾಸಕರು ವಿಶೇಷವಾಗಿ ಇಡೀ ಯೋಜನೆಯನ್ನು ರೂಪಿಸಿ ನಮಗೆ ಕ್ರೆಡಿಟ್ ಕೊಡುತ್ತಿದ್ದಾರೆ ಆದರೆ ಇದರ ಸೂತ್ರಧಾರ ರಾಮದಾಸ್ ಅವರೇ ಆಗಿದ್ದಾರೆ. ಇದನ್ನ ನಾವು ಮೈಸೂರು ಜಿಲ್ಲೆಯಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ಕೆ ಆರ್ ಕ್ಷೇತ್ರದಲ್ಲಿ ಮಾಡುತ್ತಿದ್ದೇವೆ ಇದರ ಬಗ್ಗೆ ಚರ್ಚಿಸಿ ಸಾಧಕ ಬಾಧಕಗಳನ್ನ ನೋಡಿಕೊಂಡು ನಂತರ ಇಡೀ ಮೈಸೂರಿಗೆ ವಿಸ್ತರಿಸುತ್ತೇವೆ ಎಂದರು.

ಸಾಮಾಜಿಕ ಭದ್ರತೆ ಯೋಜನೆಯ ಆದೇಶದ ಪತ್ರವನ್ನು ಸಾಂಕೇತಿಕವಾಗಿ 5 ಜನರಿಗೆ ನೀಡಿ ಮುಂದಿನ ದಿನಗಳಲ್ಲಿ ಅವರ ಮನೆ ಬಾಗಿಲಿಗೆ ಆದೇಶದ ಪ್ರತಿಯನ್ನು ತಲುಪಿಸುವ ಕಾರ್ಯಕ್ಕೆ ಹಾಗೂ ಮಹಿಳಾ ದಿನಚರಣೆಯ ಅಂಗವಾಗಿ ಮಾನ್ಯ ಶಾಸಕರ ನೇತೃತ್ವದಲ್ಲಿ ಗೃಹ ಕಛೇರಿಯಲ್ಲಿ ಕಣ್ಣಿನ ತಪಾಸಣಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಅಂದು ಒಟ್ಟು 234 ಜನರಿಗೆ ಕನ್ನಡಕ ಮತ್ತು 37 ಜನರಿಗೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಬಗ್ಗೆ ವೈದರು ಸೂಚಿಸಿದ ಹಿನ್ನಲೆಯಲ್ಲಿ ಮಾನ್ಯ ಶಾಸಕರು ಉಚಿತವಾಗಿ ಒಟ್ಟು 234 ಕನ್ನಡಕವನ್ನು ನೀಡುತ್ತಿದ್ದು ಆದರೆ ಕೋವೀಡ್ ನಿಯಮ ಜಾರಿಯಲ್ಲಿರುವುದರಿಂದ 5 ಜನರಿಗೆ ಕನ್ನಡಕ ಹಾಗೂ ಉಚಿತ ಶಸ್ತ್ರ ಚಿಕಿತ್ಸೆಗಾಗಿ ಮಹಾವೀರ ಆಸ್ಪತ್ರೆಗೆ ಅನುಮತಿ ಪತ್ರವನ್ನು ಸಾಂಕೇತಿಕವಾಗಿ ನೀಡಲಾಗುತ್ತಿದೆ ಹಾಗೂ ಉಳಿದ ಕನ್ನಡಕವನ್ನು ಫಲಾನುಭವಿಗಳ ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುವ ಕಾರ್ಯಕ್ಕೆ ಇಂದು ಚಾಲನೆ ನೀಡಿದರು.

ಕಾರ್ಯಕ್ರಮದ ವಂದನಾರ್ಪಣೆಯನ್ನು ನಗರಪಾಲಿಕಾ ಆಯುಕ್ತರಾದ ಲಕ್ಷ್ಮೀಕಾಂತ ರೆಡ್ಡಿ ನಡೆಸಿಕೊಟ್ಟರು.

ಸದರಿ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೀಶ್, ನಗರ ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ, ಉಪ ವಿಭಾಧಿಕಾರಿ ಡಾ.ಎನ್.ಸಿ.ವೆಂಕಟರಾಜು, ಡಿ.ಎಚ್.ಒ ಡಾ.ಟಿ.ಅಮರ್ ನಾಥ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜು, ಡಿಸಿಪಿ ಗೀತಾ ಪ್ರಸನ್ನ, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ , ಕೆ.ಆರ್ ಪೊಲೀಸ್ Acp ಪೂರ್ಣಚಂದ್ರ ತೇಜಸ್ವಿ, ಸ್ಥಳೀಯ ನಗರ ಪಾಲಿಕಾ ಸದಸ್ಯರು. ಭಾಜಪಾ ನಗರಾಧ್ಯಕ್ಷರಾದ ಶ್ರೀ ವತ್ಸ, ಕೆ.ಆರ್ ಕ್ಷೇತ್ರದ ಭಾಜಪಾ ಅಧ್ಯಕ್ಷರಾದ ಎಂ.ವಡಿವೇಲು, ಮುಖಂಡರಾದ ಸಂತೋಷ್ ಶಂಭು, ಜೆ ನಾಗೇಂದ್ರ ಕುಮಾರ್, ಓಂ ಶ್ರೀನಿವಾಸ್, ಹೇಮಂತ್ ಕುಮಾರ್, ದೇವರಾಜೇ ಗೌಡರು, ವಿವಿಧ ಸಂಘ ಸಂಸ್ಥೆಗಳ ಸ್ವಯಂಸೇವಕರು ಸೇರಿದಂತೆ ಇತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *