September 9, 2024

ಕೇದಾರನಾಥ್ ಆವರಣದಲ್ಲಿ ಪ್ರತಿಷ್ಠಾಪಿಸುತ್ತಿರುವ ಶಂಕರಾಚಾರ್ಯ ಪ್ರತಿಮೆ ವೀಕ್ಷಿಸಿದ ಧಾರ್ಮಿಕ ಮುಖಂಡ ಭಾನುಪ್ರಕಾಶ್ ಶರ್ಮಾ

1 min read

ಮೈಸೂರು: ಕೇದಾರನಾಥ್ ಆವರಣದಲ್ಲಿ ಇರುವ ಪ್ರಸಿದ್ಧ ಶ್ರೀ ಶಂಕರಾಚಾರ್ಯರ ಐಕ್ಯ ಸ್ಥಳದಲ್ಲಿ ಶ್ರೀ ಶಂಕರಾಚಾರ್ಯರ ಅಧ್ಯಯನ ಪೀಠ ಮತ್ತು ಮ್ಯೂಸಿಯಂ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ತೀರ್ಮಾನಿಸಿದ್ದ ಈ ಹಿನ್ನೆಲೆಯಲ್ಲಿ ಬೃಹದಾಕಾರದ ಪ್ರತಿಮೆ ನಿರ್ಮಾಣಕ್ಕೆ ದೇಶದ ಹಲವು ಭಾಗದ ಶಿಲ್ಪ ಕಲಾವಿದರನ್ನು ಆಹ್ವಾನಿಸಲಾಗಿತ್ತು. ಅದರಲ್ಲಿ ಕರ್ನಾಟಕದ ನಾಲ್ವರು ಕಲಾವಿದರಲ್ಲಿ ಅರುಣ್ ಯೋಗಿರಾಜ್ ಮೈಸೂರಿನ ಹಿರಿಮೆಯನ್ನು ಹೆಚ್ಚಿಸಿದ್ದು, ಹಾಗಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಭಾನುಪ್ರಕಾಶ್ ಶರ್ಮಾ, ಹಾಗೂ ಎಂ ಆರ್ ಬಾಲಕೃಷ್ಣ ಮತ್ತು ಬ್ರಾಹ್ಮಣ ಸಮಾಜದ ಮುಖಂಡರಾದ ಹರೀಶ್ ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್ ಸರಸ್ವತಿಪುರಂನಲ್ಲಿರುವ ಶಿಲ್ಪಕಲಾ ಕಾಲೇಜಿನ ಆವರಣಕ್ಕೆ ಭೇಟಿ ನೀಡಿ ಪ್ರತಿಮೆಯನ್ನು ವೀಕ್ಷಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಇದೆ ಮಂಗಳವಾರ ಬೆಳಿಗ್ಗೆ 10:00 ಗಂಟೆಗೆ ಸರಸ್ವತಿಪುರಂನಲ್ಲಿರುವ ಶಿಲ್ಪ ಕಲಾ ಕಾಲೇಜು ಆವರಣದಲ್ಲಿ ಪ್ರತಿಮೆಯನ್ನು ಕೆತ್ತನೆ ಮಾಡಿರುವ ಸ್ಥಳದಲ್ಲೇ

ಶಿಲ್ಪ ಕಲಾವಿದರಿಗೆ ಸನ್ಮಾನಿಸಿ ಅಭಿನಂದಿಸಲಾಗುವುದು. ಅಭಿನಂದನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ, ಶಾಸಕರಾದ ಎಸ್ ಎ ರಾಮದಾಸ್, ಎಲ್ ನಾಗೇಂದ್ರ ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಹೆಚ್ ವಿ ರಾಜೀವ್ ,ಸೇರಿದಂತೆ ಇನ್ನಿತರ ಮುಖಂಡರುಗಳು ಆಗಮಿಸಲಿದೆ ಕೆತ್ತನೆ ಮಾಡಿದಂತಹ ಎಲ್ಲಾ ಶಿಲ್ಪ ಕಲಾವಿದರಿಗೂ ಅಭಿನಂದಿಸಲಾಗುತ್ತದೆ.

About Author

Leave a Reply

Your email address will not be published. Required fields are marked *