September 8, 2024

ರಾಜ್ಯಕ್ಕೆ ಅನುಭವಿ ಐಎಎಸ್ ಅಧಿಕಾರಿಗಳು ಬೇಕಿದೆ: ಸರ್ಕಾರಕ್ಕೆ ಹೆಚ್.ವಿಶ್ವನಾಥ್ ಸಲಹೆ

1 min read

ಮೈಸೂರು: ರಾಜ್ಯಕ್ಕೆ ಅನುಭವಿ ಐಎಎಸ್ ಅಧಿಕಾರಿಗಳು ಬೇಕಿದೆ. ಸರ್ಕಾರದ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿಯನ್ನು ಬಳಕೆ ಮಾಡಿಕೊಳ್ಳಿ. ಅವರನ್ನ ಪ್ರತಿ ಜಿಲ್ಲೆಗೆ ನಿಯೋಜನೆ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸಲಹೆ ನೀಡಿದರು.

ಮೈಸೂರಿನಲ್ಲಿಂದು ಮಾತನಾಡಿದ ಅವರು ಅವರಿಗೆ ಈಗಾಗಲೇ ಸಾಕಷ್ಟು ಅನುಭವ ಇರುತ್ತೆ. ಕೊರೋನಾ ನಿರ್ವಹಣೆಗೆ ಅವರಿಗೆ 100 ಕೋಟಿ ನೀಡಿ. ಸಂಪೂರ್ಣವಾದ ಫೈನಾನ್ಸ್ ಅಧಿಕಾರ ಕೊಡಿ. ಒಂದು ಸಾವು ಆಗದಂತೆ ಅವರಿಗೆ ಎಚ್ಚರಿಕೆ ನೀಡಿ. ಅವರಿಗೆ ಪರಮಾಧಿಕಾರದ ಜೊತೆಗೆ ಆಡಳಿತದಲ್ಲಿ ಫ್ರೀ ಹ್ಯಾಂಡ್ ಕೊಡಿ. ಇದರಿಂದ ಕೊರೋನಾ ಕಂಟ್ರೋಲ್ ಮಾಡುವಂತೆ ಸೂಚಿಸಿ ಎಂದರು.

ಆಸ್ಪತ್ರೆಯಲ್ಲಿ ಸೂಪರಿಂಟೆಂಡೆಂಟ್ ಸುಮ್ಮನೆ ಕೂತಿದ್ದಾರೆ. ಅವರಿಗೆ ಹಣವಿಲ್ಲ, ಸರಿಯಾದ ವ್ಯವಸ್ಥೆ ಇಲ್ಲ. ಮೊದಲು ಅಲ್ಲಿ ಸರಿಯಾದ ವ್ಯವಸ್ಥೆ ಮಾಡಬೇಕಾಗಿದೆ ಎಂದರು. ಏ ಸಿದ್ದರಾಮಯ್ಯ ಹಳ್ಳಿಗಳಲ್ಲಿ ಸಾಯುತ್ತಿರೋದು ಅಹಿಂದದವರು. ಅಂದರೆ ಬಡ ವರ್ಗದವರು. ಸುಮ್ಮನೆ ಮಾತಾಡೋದಲ್ಲ. ಈಗ ಬಂದು ಅವರ ಕಷ್ಟ ನೋಡಬೇಕು. ಹಳ್ಳಿಗಳಲ್ಲಿ ಬೆಡ್, ಆಕ್ಸಿಜನ್ ಸಿಗದೆ ಜನ ನರಳುತ್ತ ಸಾಯುತ್ತಿದ್ದಾರೆ. ಈಗಾಗಲೇ ಹಳ್ಳಿಯಲ್ಲಿ ಕೊರೋನಾ ಹೆಚ್ಚಾಗುತ್ತಿದೆ. ಮೊದಲು ಇಲ್ಲಿನ ಜನರನ್ನು ಕೊರೊನಾದಿಂದ ಮುಕ್ತಗೊಳಿಸಿ ಎಂದು ಸರ್ಕಾರ ಸೇರಿದಂತೆ ಸಿದ್ದರಾಮಯ್ಯರನ್ನು ಜರಿದರು.

ಮೈಸೂರಿನಲ್ಲಿ ಡಿಸಿ ಇರಲಿ, ಆದರೆ ಅವರ ಮೇಲೆ ಸರ್ಕಾರದ ಕಾರ್ಯದರ್ಶಿಗಳಿರಲಿ. ಅವರಿಗೆ ಈಗ ಬೇರೆ ಕೆಲಸ ಇಲ್ಲ. ಅವರು ಬಂದು ಇಲ್ಲಿ ಕೂತರೇ ಕೆಲಸ ಆಗುತ್ತೆ. ಅವರಿಗೆ ವಿಶೇಷವಾದ ಅಧಿಕಾರ ಇರುತ್ತೆ ಎಂದರು. ಸರ್ಕಾರ ಹೆಣದ ಮೇಲೆ ಹಣ ಮಾಡುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ ಪವರ್ ವಿಜಯೇಂದ್ರ ಬಳಿ ಇದೆ. ಸರ್ಕಾರದ ಆಡಳಿತ ವಿಕೇಂದ್ರೀಕರಣ ಆಗಿದೆ. ಇದೆಲ್ಲವು ಪರ್ಸೆಂಟೆಂಜ್ಗಾಗಿ ಮಾಡಿಕೊಂಡಿರೋದು. ಮೈಸೂರು ಡಿಸಿಗೆ 10 ಪೈಸೆ ಖರ್ಚು ಮಾಡೋ ಪವರ್ಸ್ ಇಲ್ಲ. ಜಿಲ್ಲಾ ಮಂತ್ರಿಗೂ ಕೂಡ ಆ ಪವರ್ ಇಲ್ಲ. ಯಾವುದೇ ಬಿಲ್ ಪಾಸಾಗಬೇಕಾದರೆ ಬೆಂಗಳೂರಿಗೆ ಹೋಗಬೇಕು ಎಂದು ವಿಜಯೇಂದ್ರ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಿಎಂ ಅವರೇ ಜಿಲ್ಲಾಧಿಕಾರಿ ಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಪ್ರತಿ ಜಿಲ್ಲೆಗೂ ಹಿರಿಯರು ಐಎಎಸ್ ಅಧಿಕಾರಿಯನ್ನು ಮಾನಿಟರ್ ಮಾಡಲು ನಿಯೋಜಿಸಿ.ಪ್ರತಿ ಜಿಲ್ಲೆಗೂ 100 ಕೋಟಿ ರೂಪಾಯಿ ನೀಡಿ.ಅವರೇ ಆಕ್ಸಿಜನ್ ವ್ಯವಸ್ಥೆ, ಬೆಡ್ ವ್ಯವಸ್ಥೆ ಎಲ್ಲವನ್ನೂ ಅವರಿಗೆ ಮಾಡಲು ನಿರ್ದೇಶಿಸಿ.ಜಿಲ್ಲೆಯನ್ನು ಕೊರೋನಾ ಮುಕ್ತ ಮಾಡಿ, ಯಾವ ಸಾವು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನೀಡಿ. ಹಣಕಾಸು ವ್ಯವಹಾರವನ್ನು ಕೇಂದ್ರಿಕೃತ ಮಾಡಿಕೊಂಡು ಕೆಲಸ ಮಾಡಿ ಅಂದರೆ ಜಿಲ್ಲಾಧಿಕಾರಿಗಳು ಏನೂ ಮಾಡುತ್ತಾರೆ. ಜಿಲ್ಲಾಧಿಕಾರಿಗಳಿಗೆ ಹಣ ನೀಡಿ ಬಳಕೆಯ ಸ್ವತಂತ್ರ ನೀಡಿ.

ಮೈಸೂರಿನಲ್ಲಿ ಒಂದು ದಿನವೂ ಡಿಸಿ ಹಳ್ಳಿಗಳ ಕಡೆ ಹೋಗಿಲ್ಲ. ಟಾಸ್ಕ್ ಪೋರ್ಸ್ ನವರೂ ಹಳ್ಳಿಗಳಿಗೆ ಹೋಗುತ್ತಿಲ್ಲ. ಯಾವ ಜಿಲ್ಲಾಧಿಕಾರಿ ಹಳ್ಳಿಗಳ ಕಡೆ ಹೋಗಿದ್ದಾರೆ ಹೇಳಿ? ಹಳ್ಳಿಯಲ್ಲಿ ಸಾಯುತ್ತಿರುವವರು ಶ್ರಮಿಕರು. ಅಹಿಂದ ವರ್ಗದವರೇ ಶ್ರಮಿಕರು ಹೆಚ್ಚು. ಸಿದ್ದರಾಮಯ್ಯ ಇದರ ಬಗ್ಗೆ ಮಾತನಾಡಿ. ಶ್ರಮಿಕ ವರ್ಗದವರಿಗೆ ತಲಾ 5 ಸಾವಿರ ಕೊಡಿ. ಹಣ ಕೊಟ್ಟು ಇನ್ನೂ 15 ದಿನ ಲಾಕ್ ಡೌನ್ ಮಾಡಿ. ಮಾಂಸದ ಅಂಗಡಿಗಳನ್ನು ಮುಚ್ಚಿ.ಮಾಂಸದ ಅಂಗಡಿ ಮುಂದೆ ದಿನವೂ ಜನಜಾತ್ರೆ ಇರುತ್ತೆ.ಒಂದು ತಿಂಗಳು ಮಾಂಸ ತಿನ್ನದೇ ಇದ್ದರೆ ಸತ್ತು ಹೋಗುತ್ತಾರಾ?.ಜನರು ಮೊದಲಿನ ರೀತಿಯ ಜೀವನ ಶೈಲಿ ಬದುಕಲು ಆಗಲ್ಲ.ದಿನವೂ ದಿನಸಿ, ತರಕಾರಿ ತರಬೇಕಾ?.ವಾರಕ್ಕೆ ಒಂದು ದಿನ ತೆಗೆಯಿರಿ?.

ಸಂತೆಯಲ್ಲಿ ವಾರಕ್ಕೆ ಒಂದು ದಿನ ದಿನಸಿ, ತರಕಾರಿ ತಂದು ಕೊಳ್ಳುತ್ತಾರೆ.ಎಲ್ಲರೂ ಹೀಗೆ ಮಾಡಲಿ ಎಂದರು. ಎಲ್ಲವನ್ನೂ ಕೊಟ್ಟು ಮತ್ತೆ 15 ದಿನ ಲಾಕ್ಡೌನ್ ಮಾಡಿ. ಡಿಸಿ ಬೆಳಗ್ಗೆ 6 ರಿಂದ 8ರವರೆಗೂ ವ್ಯಾಪಾರಕ್ಕೆ ಅವಕಾಶ ಕೊಡ್ತಿನಿ ಅಂತಾರೆ. ದಿನವು ಏಕೆ ಅಂಗಡಿ ತೆಗಿಯಬೇಕು. ಕಾಮನ್ ಸೆನ್ಸ್ ಇಲ್ಲದೆ ಏನೇನೋ ತೀರ್ಮಾನ ಮಾಡಬಾರದು. ವಾರಕ್ಕೆ ಒಂದು ದಿನ ಮಾತ್ರ ಅವಕಾಶ ಕೊಟ್ಟು ಲಾಕ್ಡೌನ್ ಮಾಡಿ ಎಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

About Author

Leave a Reply

Your email address will not be published. Required fields are marked *