BreakingNews: ರಾಜ್ಯದಲ್ಲಿ ನಾಳೆ ಸಂಜೆಯಿಂದ 14 ದಿನ ಲಾಕ್ಡೌನ್
1 min readಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು 14 ದಿನಗಳ ಕಾಲ ಕರ್ನಾಟಕವನ್ನು ಲಾಕ್ಡೌನ್ ಮಾಡಲು ನಿರ್ಧರಿಸಿದೆ.
ಇಂದು ಸಚಿವ ಸಂಪುಟದಲ್ಲಿ ನಡೆದ ಚರ್ಚೆ ಸಂಬಂಧ ಕರ್ನಾಟಕವನ್ನ ಜನತಾ ಕರ್ಫ್ಯೂ ಮೂಲಕ ಟಫ್ ರೂಲ್ಸ್ ಜಾರಿ ಮಾಡಿರುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ, ಈಗಾಗಲೇ ಕರೋನಾ ಪ್ಯಾಂಡಮಿಕ್ ಆಗಿ ಹರಡುತ್ತಿದೆ. ಆ ಹಿನ್ನಲೆಯಲ್ಲಿ ಕಠಿಣವಾದ ಕ್ರಮವನ್ನ ಕೈಗೊಂಡಿದ್ದೇವೆ. ನಾಳೆ ರಾತ್ರಿಯಿಂದ 14 ದಿನ ಲಾಕ್ ಡೌನ್ ಜಾರಿಯಾಗಲಿದೆ. ಬೆಳಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಪೊಲೀಸರು ಬಂದು ಬಾಗಿಲು ಹಾಕಿಸಿಕೊಳ್ಳೊದು ಬೇಡ’ ನೀವೆ ಖುದ್ದಾಗಿ ಬಾಗಿಲು ಹಾಕಿ, ಕಟ್ಟಡ ಕಾಮಗಾರಿ, ಕೃಷಿ ಮುಂದುವರೆಯಲಿದೆ ಎಂದರು.
ಜಿಲ್ಲಾಢಳಿತ ಹಾಗೂ ತಾಲೂಕು ಆಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ನಮ್ಮಲ್ಲಿ ಯಾವುದೇ ಆಕ್ಸಿಜನ್ ಕೊರತೆ ಇಲ್ಲ’ ರೆಮಿಡಿಸಿವರ್ ಕೊರತೆ ಸಹ ಇಲ್ಲ’ ಜನರು ಇದಕ್ಕೆ ಕೈಜೋಡಿಸಬೇಕು. ಬಸ್ ಸಂಚಾರ ಕೂಡ ಸ್ಟಾಪ್ ಆಗಿದ್ದು, ಉತ್ಪಾದನ ವಲಯಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ ಎಂದ್ರು. ಇದೇವೇಳೆ ಸಿಎಂಗೆ ಹಲವು ಸಂಪುಟ ಸಚಿವರು ಸಾಥ್ ನೀಡಿದ್ದರು.