ರಾಜ್ಯದಲ್ಲಿ ಲಾಕ್​ಡೌನ್ ಇಲ್ಲ: ವಾರಾಂತ್ಯ – ನೈಟ್​ ಕರ್ಫ್ಯೂ ಜಾರಿ;- ಶಾಲಾ ಕಾಲೇಜು ಬಂದ್

1 min read

ಮೈಸೂರು: ಕೋವಿಡ್ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಎ.21ರಿಂದ ಮೇ4ರವರೆಗೆ ಅನ್ವಯವಾಗುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ಎ.21ರಿಂದ ಪ್ರತಿ ದಿನ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಶನಿವಾರ ಮತ್ತು ರವಿವಾರ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ.

ಏನುಂಟು..? ಏನಿಲ್ಲ..?

  • ಶಾಲಾ ಕಾಲೇಜು ಹಾಗೂ ಸ್ವಿಮ್ಮಿಂಗ್ ಪೂಲ್​​ಗಳು, ಪಾರ್ಕ್​​ ಜಿಮ್ ಮತ್ತು ಸಿನಿಮಾ ಬಂದ್
  • ಬಾರ್​ ಅಂಡ್​ ರೆಸ್ಟೋರೆಂಟ್​ ತೆರೆದಿರುತ್ತದೆ. ಆದರೆ ಪಾರ್ಸೆಲ್​ಗೆ ಮಾತ್ರ ಅವಕಾಶ
  • ಮದುವೆಗಳಲ್ಲಿ 50 ಜನರಿಗ ಮಾತ್ರ ಅವಕಾಶ
  • ಅಂತ್ಯ ಸಂಸ್ಕಾರಕ್ಕೆ 20 ಜನರು ಮಾತ್ರ ಅವಕಾಶ.
  • ಸರ್ಕಾರಿ ಕಚೇರಿಗಳಲ್ಲಿ ಅರ್ಧದಷ್ಟು ಮಂದಿ ಕಚೇರಿಗೆ ಹಾಜರಾಗಲಿದ್ದು, ಇನ್ನರ್ಧದಷ್ಟು ಜನರು ಕೋವಿಡ್​ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.
  • ಅಂತರ್​​ರಾಜ್ಯ ಪ್ರಯಾಣಕ್ಕೆ ಅವಕಾಶ ಇರಲಿದೆ.
  • ಎಲ್ಲಾ ಧಾರ್ಮಿಕ ಕೇಂದ್ರಗಳು ಸಾರ್ವಜನಿಕರಿಗೆ ಬಂದ್. ಆದರೆ ದೇವಸ್ಥಾನಗಳಲ್ಲಿ ಅಗತ್ಯ ಪೂಜಾ ಕಾರ್ಯಕ್ರಮಗಳನ್ನು ಸಿಬ್ಬಂದಿ ನಡೆಸಲು ಅವಕಾಶ
  • ತರಕಾರಿ ಮಾರುಕಟ್ಟೆ ತೆರೆದ ಪ್ರದೇಶದಲ್ಲಿ ಏ.23ರಿಂದ ಮಾರಾಟ ವ್ಯವಸ್ಥೆ ಮಾಡಲಾಗುತ್ತದೆ.
  • ಬ್ಯಾಂಕ್​, ಎಟಿಎಂ, ಇ-ಕಮರ್ಸ್​​​ ಸೇವೆಗಳಿಗೆ ಅವಕಾಶವಿದೆ
  • ಎಲ್ಲಾ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಹಾಗೂ ಮನ್ಸೂನ್​​ ಪೂರ್ವ ಚಟುವಟಿಕೆಗಳಿಗೆ ಅವಕಾಶ ಇರಲಿದೆ.
  • ಬ್ಯೂಟಿ ಪಾರ್ಲರ್​, ಸೆಲ್ಯೂನ್​​ಗಳಿಗೆ ಕೊರೊನಾ ನಿಯಮಗಳ ಅನ್ವಯ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ.
  • ಐಟಿ-ಬಿಟಿ ಕಂಪೆನಿಗಳಿಗೆ ವರ್ಕ್​​ ಫಾರ್ಮ್​ ಹೋಮ್​ಗೆ ಮಾತ್ರ ಅವಕಾಶ. ಆದರೆ ತುರ್ತು ಸಂದರ್ಭದಲ್ಲಿ ಕಚೇರಿಗೆ ತೆರಳಲು ಅವಕಾಶವಿದೆ
  • ಬಸ್​​ಗಳಲ್ಲಿ ಶೇ.50 ಅಸನ ಭರ್ತಿಗೆ ಮಾತ್ರ ಅವಕಾಶ
  • ಸೆಕ್ಷನ್ 144 ಸಿಆರ್​ಪಿಸಿ ಅಡಿಯಲ್ಲಿ ರಾಜ್ಯಾದ್ಯಂತ ಜಾರಿ ಮಾಡಲಾಗುತ್ತದೆ.
  • ಇಂಡಸ್ಟ್ರಿಗಳಿಗೆ ನೈಟ್​ ಶಿಫ್ಟ್​ಗೆ ಅವಕಾಶವಿರುತ್ತದೆ
  • ಪ್ರಯಾಣಿಕರು ನೈಟ್​ ಕರ್ಫ್ಯೂ ಟಿಕೆಟ್​ ತೋರಿಸಿ ತೆರಳಲು ಅವಕಾಶವಿರುತ್ತದೆ.
  • ಸದ್ಯದ ಮಾರ್ಗಸೂಚಿ ಅಗತ್ಯ ಮಾರ್ಗಸೂಚಿ 14 ದಿನಗಳ ಕಾಲ ಇರಲಿದೆ.

About Author

Leave a Reply

Your email address will not be published. Required fields are marked *