ರಾಜ್ಯದಲ್ಲಿ ಲಾಕ್ಡೌನ್ ಇಲ್ಲ: ವಾರಾಂತ್ಯ – ನೈಟ್ ಕರ್ಫ್ಯೂ ಜಾರಿ;- ಶಾಲಾ ಕಾಲೇಜು ಬಂದ್
1 min readಮೈಸೂರು: ಕೋವಿಡ್ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಎ.21ರಿಂದ ಮೇ4ರವರೆಗೆ ಅನ್ವಯವಾಗುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಎ.21ರಿಂದ ಪ್ರತಿ ದಿನ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಶನಿವಾರ ಮತ್ತು ರವಿವಾರ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ.
ಏನುಂಟು..? ಏನಿಲ್ಲ..?
- ಶಾಲಾ ಕಾಲೇಜು ಹಾಗೂ ಸ್ವಿಮ್ಮಿಂಗ್ ಪೂಲ್ಗಳು, ಪಾರ್ಕ್ ಜಿಮ್ ಮತ್ತು ಸಿನಿಮಾ ಬಂದ್
- ಬಾರ್ ಅಂಡ್ ರೆಸ್ಟೋರೆಂಟ್ ತೆರೆದಿರುತ್ತದೆ. ಆದರೆ ಪಾರ್ಸೆಲ್ಗೆ ಮಾತ್ರ ಅವಕಾಶ
- ಮದುವೆಗಳಲ್ಲಿ 50 ಜನರಿಗ ಮಾತ್ರ ಅವಕಾಶ
- ಅಂತ್ಯ ಸಂಸ್ಕಾರಕ್ಕೆ 20 ಜನರು ಮಾತ್ರ ಅವಕಾಶ.
- ಸರ್ಕಾರಿ ಕಚೇರಿಗಳಲ್ಲಿ ಅರ್ಧದಷ್ಟು ಮಂದಿ ಕಚೇರಿಗೆ ಹಾಜರಾಗಲಿದ್ದು, ಇನ್ನರ್ಧದಷ್ಟು ಜನರು ಕೋವಿಡ್ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.
- ಅಂತರ್ರಾಜ್ಯ ಪ್ರಯಾಣಕ್ಕೆ ಅವಕಾಶ ಇರಲಿದೆ.
- ಎಲ್ಲಾ ಧಾರ್ಮಿಕ ಕೇಂದ್ರಗಳು ಸಾರ್ವಜನಿಕರಿಗೆ ಬಂದ್. ಆದರೆ ದೇವಸ್ಥಾನಗಳಲ್ಲಿ ಅಗತ್ಯ ಪೂಜಾ ಕಾರ್ಯಕ್ರಮಗಳನ್ನು ಸಿಬ್ಬಂದಿ ನಡೆಸಲು ಅವಕಾಶ
- ತರಕಾರಿ ಮಾರುಕಟ್ಟೆ ತೆರೆದ ಪ್ರದೇಶದಲ್ಲಿ ಏ.23ರಿಂದ ಮಾರಾಟ ವ್ಯವಸ್ಥೆ ಮಾಡಲಾಗುತ್ತದೆ.
- ಬ್ಯಾಂಕ್, ಎಟಿಎಂ, ಇ-ಕಮರ್ಸ್ ಸೇವೆಗಳಿಗೆ ಅವಕಾಶವಿದೆ
- ಎಲ್ಲಾ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಹಾಗೂ ಮನ್ಸೂನ್ ಪೂರ್ವ ಚಟುವಟಿಕೆಗಳಿಗೆ ಅವಕಾಶ ಇರಲಿದೆ.
- ಬ್ಯೂಟಿ ಪಾರ್ಲರ್, ಸೆಲ್ಯೂನ್ಗಳಿಗೆ ಕೊರೊನಾ ನಿಯಮಗಳ ಅನ್ವಯ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ.
- ಐಟಿ-ಬಿಟಿ ಕಂಪೆನಿಗಳಿಗೆ ವರ್ಕ್ ಫಾರ್ಮ್ ಹೋಮ್ಗೆ ಮಾತ್ರ ಅವಕಾಶ. ಆದರೆ ತುರ್ತು ಸಂದರ್ಭದಲ್ಲಿ ಕಚೇರಿಗೆ ತೆರಳಲು ಅವಕಾಶವಿದೆ
- ಬಸ್ಗಳಲ್ಲಿ ಶೇ.50 ಅಸನ ಭರ್ತಿಗೆ ಮಾತ್ರ ಅವಕಾಶ
- ಸೆಕ್ಷನ್ 144 ಸಿಆರ್ಪಿಸಿ ಅಡಿಯಲ್ಲಿ ರಾಜ್ಯಾದ್ಯಂತ ಜಾರಿ ಮಾಡಲಾಗುತ್ತದೆ.
- ಇಂಡಸ್ಟ್ರಿಗಳಿಗೆ ನೈಟ್ ಶಿಫ್ಟ್ಗೆ ಅವಕಾಶವಿರುತ್ತದೆ
- ಪ್ರಯಾಣಿಕರು ನೈಟ್ ಕರ್ಫ್ಯೂ ಟಿಕೆಟ್ ತೋರಿಸಿ ತೆರಳಲು ಅವಕಾಶವಿರುತ್ತದೆ.
- ಸದ್ಯದ ಮಾರ್ಗಸೂಚಿ ಅಗತ್ಯ ಮಾರ್ಗಸೂಚಿ 14 ದಿನಗಳ ಕಾಲ ಇರಲಿದೆ.