ಮೈಸೂರಿನ ಕಬಿನಿ ಡ್ಯಾಂ ಭರ್ತಿಗೆ 8 ಅಡಿ ಮಾತ್ರ ಬಾಕಿ!
1 min readರಾಜ್ಯದಲ್ಲೇ ಮೊದಲು ಭರ್ತಿಯಾಗುವ ಜಲಾಶಯ ಎಂದು ಖ್ಯಾತಿಗಳಿಸಿರೋ ಮೈಸೂರಿನ ಎಚ್ ಡಿ ಕೋಟೆಯ ಬೀಚನಹಳ್ಳಿಯ ಕಬಿನಿ ಜಲಾಶಯ ಭರ್ತಿಗೆ ದಿನಗಣನೆ ಶುರುವಾಗಿದೆ.
ಕಬಿನಿ ನದಿ ಪಾತ್ರ ಹಾಗೂ ಕೇರಳದ ವೈನಾಡಿನಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಕಾರಣ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು ಇದರಿಂದ ಜಲಾಶಯ ಭರ್ತಿಗೆ ಇನ್ನು 8 ಅಡಿ ಮಾತ್ರ ಬಾಕಿ ಇದೆ.
ಕಬಿನಿ ಜಲಾಶಯದ ನೀರಿನ ಮಟ್ಟ ಸಮುದ್ರ ಮಟ್ಟದಿಂದ 2284 ಅಡಿಗಳು. ಅಂದ್ರೆ 84 ಅಡಿ ಇದೆ. ಆದರೆ ಇದೀಗಾ ಜಲಾಶಯ 75.82 ಅಡಿ ತಲುಪಿದ್ದು ಜಲಾಶಯ ಭರ್ತಿಗೆ ಇನ್ನು 8 ಅಡಿ ಮಾತ್ರವೇ ಬಾಕಿ ಇದೆ. ಸದ್ಯ ಒಳ ಹರಿಗು ಮೂರು ಸಾವಿರ ಕ್ಯೂಸೆಕ್ಸ್ ಇದ್ದು, ಹೊರ ಹರಿವು 2 ಸಾವಿರ ಕ್ಯೂಸೆಕ್ಸ್ ಇದೆ. ಜೂ.20ರಂದು ನದಿ ಪಾತ್ರದ ಜನರಿಗೆ ಉತ್ತಮ ಮಳೆಯಾಗುತ್ತಿದ್ದ ಕಾರಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿತ್ತು. ಅದರಂತೆ ಇದೀಗಾ ಮಳೆಯ ಪ್ರಮಾಣ ಕಡಿಮೆ ಇದ್ದರು ಜಲಾಶಯ ಭರ್ತಿಯಾಗುವತ್ತ ಸಾಗಿದೆ.