ಮೈಸೂರಿನಲ್ಲಿ ಜಿಲ್ಲಾ ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ!
1 min read-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಅಭಿವೃದ್ಧಿ ನಿಗಮದ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ವಹಣೆಗೆ ಹಾಗೂ ನಿಗಮದ ಯೋಜನೆಗಳ ಕುರಿತು ಅರಿವು ಮೂಡಿಸಲು ಜಿಲ್ಲಾ ಸಂಯೋಜಕರ ತಾತ್ಕಾಲಿಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿರುತ್ತದೆ.
ಅಭ್ಯರ್ಥಿಯು MSW / MA in Womens Studies ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ 3 ರಿಂದ 5 ವರ್ಷಗಳ ಅನುಭವ ಹೊಂದಿದ್ದು, ಕಡ್ಡಾಯವಾಗಿ ಅನುಭವ ಪ್ರಮಾಣ ಪತ್ರ ಸಲ್ಲಿಸುವುದು. ಅಭ್ಯರ್ಥಿಯು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಪ್ರವಾಸ ಕೈಗೊಳ್ಳಲು ದೈಹಿಕವಾಗಿ ಸಾಮರ್ಥ್ಯದ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಮಾಸಿಕ ಭತ್ಯೆ 12,000ರೂ. ಇರಲಿದ್ದು, ಪ್ರಯಾಣ ಭತ್ಯೆಯಾಗಿ 2,000ರೂ ನೀಡಲಾಗುವುದು. ಕಾರ್ಯಕ್ಷಮತೆಯ ಆಧಾರದ ಮೇಲೆ ಮುಂದುವರಿಸಲಾಗುವುದು. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು ಆಗಸ್ಟ್ 3ರೊಳಗೆ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ತ್ರೀ ಶಕ್ತಿ ಭವನ, ಕೃಷ್ಣದೇವರಾಯ ವೃತ್ತ, ವಿಜಯನಗರ 2ನೇ ಹಂತ, ಮೈಸೂರು ಇಲ್ಲಿಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0821-2495432 ಅನ್ನು ಸಂಪರ್ಕಿಸುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.